ಮನೆ ಮುಂದೆ ಆಟಿಕೆ ಕಾರ್ ಓಡಿಸುವ ಮಗು ಟ್ರಾಫಿಕ್ ಮಧ್ಯೆ ಹೋದರೆ ಏನಾಗಬೇಡಾ? ಹೌದು ಚೀನಾದಲ್ಲಿ ಈ ಘಟನೆ ನಡೆದಿದ್ದು ಮಗುವೊಂದು ಕಾರ್ ಓಡಿಸುತ್ತ ರಸ್ತೆಗಿಳಿದಿದೆ. ಪ್ರವಾಹೋಪಾದಿಯಲ್ಲಿ ಸಾಗುತ್ತಿದ್ದ ವಾಹನಗಳ ಮಧ್ಯೆ ತನ್ನ ಕಾರ್ ಜತೆ ಸಾಗಿದೆ. ಆದರೆ ಯಾರು ಕೂಡ ಕ್ಯಾರೇ ಅಂದಿಲ್ಲ. ಕೊನೆಗೆ ಸಂಚಾರಿ ಪೊಲೀಸ್ ರಸ್ತೆ ಮಧ್ಯೆ ಬಂದು ಮಗು ಮತ್ತು ಅದರ ಕಾರ್ ಎತ್ತಿಕೊಂಡು ರಸ್ತೆ ಬದಿ ತೆರಳಿದ್ದಾನೆ.