ಪಾಕಿಸ್ತಾನವನ್ನು ಕೊಳಕು ಕಣ್ಣಿನಿಂದ ನೋಡಿದ್ರೆ ಅವ್ರ ಕಣ್ಣು ಕಿತ್ತು ಹಾಕುತ್ತೇವೆ- ರೈಲ್ವೆ ಸಚಿವರಿಂದ ಬೆದರಿಕೆ

ಗುರುವಾರ, 21 ಫೆಬ್ರವರಿ 2019 (06:26 IST)
ಪಾಕಿಸ್ತಾನ : ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಂತರ  ಈಗ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.


ಈ ಮೊದಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್,’ ಪುಲ್ವಾಮ ದಾಳಿಗೆ ಭಾರತ ಸರಿಯಾದ ಸಾಕ್ಷ್ಯ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅಲ್ಲದೇ ಭಾರತ ಸರ್ಕಾರ ಒಂದೊಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಕೂಡ ಸುಮ್ಮನೆ ಕೂರುವುದಿಲ್ಲ. ಪ್ರತಿದಾಳಿ ನಡೆಸಲು ನಮಗೆ ಬರುತ್ತದೆ. ಆದರೆ ಈ ವಿಚಾರ ಮಾತುಕತೆಯಲ್ಲಿ ಬಗೆ ಹರಿಸಿಕೊಳ್ಳಬಹುದು’ ಎಂದು ತಿಳಿಸಿದ್ದರು.


ಆದರೆ ಇದೀಗ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಹಾಕಿ, ‘’ನಾವು ಬಳೆ ತೊಟ್ಟುಕೊಂಡಿಲ್ಲ. ಪಾಕಿಸ್ತಾನವನ್ನು ಕೊಳಕು ಕಣ್ಣಿನಿಂದ ನೋಡಿದ್ರೆ ಅವ್ರ ಕಣ್ಣು ಕಿತ್ತು ಹಾಕುತ್ತೇವೆ. ನಂತ್ರ ಹಲ್ಲು. ಪಾಕಿಸ್ತಾನ ನಮ್ಮ ಜೀವನ. ದೇವಸ್ಥಾನದ ಗಂಟೆ ಬಾರಿಸೋದಿಲ್ಲ. ಪಾಕಿಸ್ತಾನ ಮುಸ್ಲಿಮರ ದೇಶ. ಇಡೀ ವಿಶ್ವದ ಮುಸ್ಲಿಮರು ಪಾಕಿಸ್ತಾನವನ್ನು ನೋಡ್ತಿದ್ದಾರೆ. ಇಮ್ರಾನ್ ಖಾನ್ ನೇತೃತ್ವದಲ್ಲಿ 20 ಕೋಟಿ ಜನರು ಸಿದ್ಧವಾಗಿದ್ದಾರೆ. ಶಾಂತಿಯಿರಲಿ, ಯುದ್ಧವಿರಲಿ ನಾವು ಇಮ್ರಾನ್ ಬೆಂಬಲಕ್ಕಿದ್ದೇವೆ'' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ