ಜೈಪುರ ಕೇಂದ್ರ ಜೈಲಿನಲ್ಲಿದ್ದ ಪಾಕಿಸ್ತಾನ ಮೂಲದ ಕೈದಿಯನ್ನು ಕೊಂದ ಸಹ ಕೈದಿಗಳು
ಗುರುವಾರ, 21 ಫೆಬ್ರವರಿ 2019 (06:12 IST)
ಜೈಪುರ : ಪಾಕಿಸ್ತಾನ ಮೂಲದ ಕೈದಿಯನ್ನು ಸಹ ಕೈದಿಗಳೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೈಪುರ ಕೇಂದ್ರ ಜೈಲಿನಲ್ಲಿ ಬುಧವಾರ ನಡೆದಿದೆ.
ಶಕೀರ್ ಉಲ್ಲಾ (50) ಮೃತಪಟ್ಟ ಪಾಕಿಸ್ತಾನ ಮೂಲದ ಕೈದಿ. ಈತ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಕಾರಣ ಈತನನ್ನು 2011ರಲ್ಲಿ ಬಂಧಿಸಲಾಗಿತ್ತು. ಬಳಿಕ 2017ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಆದರೆ ಬುಧವಾರ ಟಿವಿ ನೋಡುತ್ತಿದ್ದಾಗ ನಾಲ್ವರು ಕೈದಿಗಳು ಜಗಳವಾಗಿದ್ದು, ಕೋಪದಿಂದ ಮೂವರು ಕಲ್ಲು ಎತ್ತಿಕೊಂಡು ಶಕೀರ್ ಮೇಲೆ ಎಸೆದಿದ್ದಾರೆ. ಪರಿಣಾಮ ಶಕೀರ್ ಮೃತಪಟ್ಟಿದ್ದಾನೆ.
ಈ ಘಟನೆಗೆ ನಡೆದ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ನ್ಯಾಯಾಂಗ ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಈ ವೇಳೆ ಸ್ಥಳದಲ್ಲಿ ಪೊಲೀಸರು ಇದ್ದರಾ? ಅಷ್ಟು ದೊಡ್ಡ ಕಲ್ಲು ಕೈದಿಗಳಿಗೆ ಎಲ್ಲಿ ಸಿಕ್ಕಿತು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.