ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ : ಯೋಗಿ
ಶನಿವಾರ, 11 ಡಿಸೆಂಬರ್ 2021 (13:33 IST)
ಲಕ್ನೋ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 360ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಒಟ್ಟು 403 ವಿಧನಸಭಾ ಕ್ಷೇತ್ರಗಳಿವೆ. ಸಮಾಜವಾದಿ ಪಕ್ಷದ ಅಖಿಲೇಷ್ ಯಾದವ್ ಅವರು ಚುನಾವಣೆಗೆ ಮೊದಲೇ ಆಢಳಿತ ಪಕ್ಷವನ್ನು ವಿರೋಧಿಸುವ ಕೆಲಸ ಆರಂಭಿಸಿದ್ದಾರೆ, ಅದು ಅವರಿಗೆ ಫಲ ನೀಡುವುದಿಲ್ಲ.
ಈ ಹಿಂದಿನ ಸರ್ಕಾರಗಳು ಹುಟ್ಟುಹಾಕಿದ್ದ ಮಾಫಿಯಾಗಳನ್ನು ನಮ್ಮ ಸರ್ಕಾರ ನಿರ್ಣಾಮ ಮಾಡಿದೆ. ಕ್ರಿಮಿನಲ್ಗಳು, ಭ್ರಷ್ಟಾಚಾರಿಗಳು ಮತ್ತು ಗ್ಯಾಂಗ್ಸ್ಟಾರ್ಗಳನ್ನು ಧ್ವಂಸ ಮಾಡಿದ್ದೇವೆ. ಒಂದು ವೇಳೆ ಅಖಿಲೇಶ್ ಅವರಿಗೆ ಈ ರೀತಿ ಕ್ರಮಗಳಿಂದ ಕಷ್ಟವಾಗುತ್ತಿದ್ದರೆ, ಅವರು ಕ್ರಿಮಿನಲ್ಗಳನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.