ಉತ್ತರ ಕೋರಿಯಾ ವನ್ನು ‘ವರ್ಸ್ಟ್ ಹ್ಯೂಮನ್ ಟ್ರಾಫಿಕಿಂಗ್ ನೇಶನ್’ ಪಟ್ಟಿಗೆ ಸೇರಿಸಲು ಕಾರಣವೇನು?
ಶನಿವಾರ, 30 ಜೂನ್ 2018 (13:25 IST)
ಅಮೇರಿಕಾ: ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ , ಬಲವಂತವಾಗಿ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುತ್ತಿರುವ ದೇಶಗಳ ಬಗ್ಗೆ 16ನೇ ವರ್ಷದ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಉತ್ತರ ಕೋರಿಯಾ "ವರ್ಸ್ಟ್ ಹ್ಯೂಮನ್ ಟ್ರಾಫಿಕಿಂಗ್ ನೇಶನ್" ಎಂಬ ಪಟ್ಟಿಗೆ ಸೇರ್ಪಡೆಗೊಂಡಿದೆ. ಉತ್ತರ ಕೋರಿಯಾ ಸರ್ಕಾರ ಮಾನವ ಸಾಗಾಣೆಯನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿಲ್ಲ. ಆದಕಾರಣ 2018ರ ಮಾನವ ಸಾಗಾಣೆ ವರದಿಯಲ್ಲಿ ಅತೀ ಕೆಳ ಮಟ್ಟದ ವಿಭಾಗದಲ್ಲಿರುವ ಚೀನಾ, ರಷ್ಯಾ, ಇರಾನ್ ದೇಶಗಳ ಜೊತೆ ಉತ್ತರ ಕೋರಿಯಾವನ್ನು ಕೂಡ ಸೇರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ