ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳ ಮೇಲೆ ಗರಂ ಆಗಿದ್ಯಾಕೆ?
ಶುಕ್ರವಾರ, 15 ಜೂನ್ 2018 (10:59 IST)
ಅಮೇರಿಕಾ : ಐತಿಹಾಸಿಕ ಶೃಂಗಸಭೆಯ ವಿಚಾರವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾದ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಜೂನ್ 12ರಂದು ಅಣ್ವಸ್ತ್ರ ನಿಶ್ಶಸ್ತ್ರೀಕರಣದ ವಿಷಯವನ್ನು ಪ್ರಮುಖವಾಗಿಸಿಕೊಂಡು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಜೊತೆ ಐತಿಹಾಸಿಕ ಶೃಂಗಸಭೆ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಅಮೆರಿಕದ ಮಾಧ್ಯಮಗಳು ಮುಕ್ತ ಮನಸ್ಸಿನಿಂದ ವರದಿ ಮಾಡಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಡುಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್ ಅವರು,’ ಸುಳ್ಳು ಸುದ್ದಿಗಳೇ ದೇಶದ ಜನರ ಶತ್ರು. ಮೂರ್ಖರಿಂದ ಸುಳ್ಳು ಸುದ್ದಿಗಳನ್ನು ಸುಲಭವಾಗಿ ಹರಿಬಿಡಲಾಗುತ್ತಿದೆ. ವಿಶೇಷವಾಗಿ ಎನ್‌ಬಿಸಿ ಮತ್ತು ಸಿಎನ್‌ಎನ್ ಉತ್ತರ ಕೊರಿಯಾ ದೊಂದಿಗಿನ ಮಹತ್ವದ ಒಪ್ಪಂದವನ್ನು ಕಡೆಗಣಿಸುವ ಪ್ರಯತ್ನ ಮಾಡಿವೆ’ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ