ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ಏನ್‌ ಮಾಡ್ತೀರಾ?: ಪ್ರಧಾನಿ ಮೋದಿಗೆ ಚೀನಾ ನೇರ ಎಚ್ಚರಿಕೆ

ಮಂಗಳವಾರ, 8 ಆಗಸ್ಟ್ 2017 (19:34 IST)
ಡೊಕ್ಲಾಮ್‌ನಲ್ಲಿ ಎರಡು ಸೇನಾಪಡೆಗಳು ಒಂದೇ ಬಾರಿಗೆ ಹಿಂಪಡೆಯಬೇಕು ಎನ್ನುವ ಭಾರತದ ಮನವಿಯನ್ನು ತಿರಸ್ಕರಿಸಿದ ಚೀನಾ, ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ದೆಹಲಿ ಸರಕಾರ ಏನು ಮಾಡುತ್ತದೆ ಎಂದು ಚೀನಾ ತನ್ನ ಅಧಿಕಪ್ರಸಂಗತೆಯನ್ನು ಮೆರೆದಿದೆ. 
ಸಿಕ್ಕಿಂ ವಲಯದ ಡೋಕ್ಲಾಮ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳು ಪರಸ್ಪರ ಮುಖಾಮುಖಿಯಾಗಿವೆ. 50 ದಿನಗಳಿಂದ ಭಾರತೀಯ ಸೈನಿಕರು ಚೀನದ ಸೇನೆಯು ಈ ಪ್ರದೇಶದಲ್ಲಿ ರಸ್ತೆಯನ್ನು ನಿರ್ಮಿಸದಂತೆ ತಡೆದಿದ್ದಾರೆ.
 
ಚೀನಾ ದೇಶದ ಗಡಿಯೊಳಗೆ ಭಾರತ ರಸ್ತೆಯನ್ನು ನಿರ್ಮಿಸುತ್ತಿದೆ. ಕೂಡಲೇ ಭಾರತೀಯ ಸೇನೆ ವಿವಾದಿತ ಡೊಕ್ಲಾಮ್ ಪ್ರದೇಶದಿಂದ ನಿರ್ಗಮಿಸಬೇಕು ಎಂದು ಒತ್ತಾಯಿಸಿದೆ. ಡೊಕ್ಲಾಮ್ ಪ್ರದೇಶ ಭೂತಾನ್‌ಗೆ ಸೇರಿದೆ ಎಂದು ಭೂತಾನ್ ಸರಕಾರ ಹೇಳಿದೆ. ಆದರೆ, ಚೀನಾ ತನ್ನದೆಂದು ವಾದಿಸುತ್ತಿದೆ. ಚೀನಾದೊಂದಿಗೆ ನಮ್ಮದು ಯಾವುದೇ ವೈರತ್ವವಿಲ್ಲ ಎಂದು ತಿಳಿಸಿದೆ. 
 
 ಡೊಕ್ಲಾಮ್ ಗಡಿಯಲ್ಲಿ ಒಬ್ಬನೇ ಒಬ್ಬ ಭಾರತೀಯ ಸೈನಿಕ ಇದ್ದರೆ ಅದು ನಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವ್ಯವಹಾರಗಳ ಉಪ ನಿರ್ದೇಶಕ ವಾಂಗ್ ವೆನ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ