ಮಗುವಿಗೆ ಕಚ್ಚಿದ ಶಿಕ್ಷೆಗೆ ನಾಯಿಗೆ ಕೊಟ್ಟ ಶಿಕ್ಷೆ ಏನು ಗೊತ್ತಾ?!

ಗುರುವಾರ, 18 ಮೇ 2017 (06:39 IST)
ಲಾಹೋರ್: ಪಾಕಿಸ್ತಾನದಲ್ಲಿ ಎಂತೆಂತಹಾ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ನಾಯಿಯೊಂದು ಮಗುವಿಗೆ ಕಚ್ಚಿದ ತಪ್ಪಿಗೆ ಅದಕ್ಕೆ ಸಿಕ್ಕಿದ ಶಿಕ್ಷೆಗೆ ಅಳುವುದೋ ನಗುವುದೋ ತಿಳಿಯದು.

 
ಪಂಜಾಬ್ ಪ್ರಾಂತ್ಯದಲ್ಲಿ ನಾಯಿಯೊಂದು ಮಗುವಿಗೆ ಕಚ್ಚಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದ ಸಹಾಯಕ ಕಮಿಷನರ್ ರಾಜಾ ಸಲೀಂ ನಾಯಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ! ನಾಯಿ ಮಗುವಿಗೆ ಕಚ್ಚಿದ ತಪ್ಪಿಗೆ ಅದನ್ನು ಕೊಲ್ಲಬೇಕು ಎಂದು ಅವರು ತಮ್ಮ  ತೀರ್ಪಿನಲ್ಲಿ ಷರಾ ಬರೆದಿದ್ದಾರೆ.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಾಯಿಯ ಮಾಲಿಕ ಇದೀಗ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ‘ನನ್ನ ನಾಯಿಗೆ ಮಗುವಿನ ಪೋಷಕರ ದೂರಿನ ಮೇರೆಗೆ ಈಗಾಗಲೇ ಒಂದು ವಾರದ ಜೈಲು ಶಿಕ್ಷೆ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಶಿಕ್ಷೆ ಒಪ್ಪುವಂತದ್ದಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ!

ಇದೀಗ ನಾಯಿ ಮಾಲಿಕರು ತನ್ನ ನಾಯಿಗೆ ನ್ಯಾಯ ಕೊಡಿ ಎಂದು ಕೋರ್ಟ್ ಬಾಗಿಲು ತಟ್ಟುತ್ತಿದ್ದಾರೆ. ಇವರ ಅವಸ್ಥೆ ನೋಡಿ ಬೆಂಗಳೂರಿನ ಬೀದಿ ನಾಯಿಗಳೆಲ್ಲಾ ನಿಟ್ಟುಸಿರು ಬಿಟ್ಟರೂ ಬಿಡಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ