ಡೊನಾಲ್ಡ್‌ ಟ್ರಂಪ್‌ ಗೂಗಲ್‌ ವಿರುದ್ಧ ಮಾಡಿದ ಆರೋಪವೇನು?

ಗುರುವಾರ, 30 ಆಗಸ್ಟ್ 2018 (11:08 IST)
ವಾಷಿಂಗ್ಟನ್ : ತನ್ನ ವಿರುದ್ಧ ಅಸತ್ಯವಾದ ಮಾಹಿತಿಗಳನ್ನು ನೀಡುತ್ತಿದೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ ವಿರುದ್ಧ ಕಿಡಿಕಾರಿದ್ದಾರೆ.


ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಕುರಿತು ಟ್ವೀಟ್ ಮಾಡಿ "ನನ್ನ ವಿರುದ್ಧ ನಕಾರಾತ್ಮಕ ಸುದ್ದಿ-ಮಾಹಿತಿಗಳೇ ಸರ್ಚ್‌ನಲ್ಲಿ ಬರುತ್ತಿವೆ. ಇಂಥ ಸುದ್ದಿ, ಮಾಹಿತಿಗಳು ಶೇ.96ರಷ್ಟು ಎಡಪಂಥೀಯ ಧೋರಣೆ ಹೊಂದಿರುವ ಮಾಧ್ಯಮಗಳಿಂದ ಬರುತ್ತದೆ. ಅವುಗಳು ಸತ್ಯಕ್ಕಿಂತ ದೂರವಾಗಿರುತ್ತವೆ'’ ಎಂದು ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ ವಿರುದ್ಧ ಆರೋಪಮಾಡಿದ್ದಾರೆ.


ಟ್ರಂಪ್‌ ಅವರ ಈ ಆರೋಪವು ಆನ್‌ಲೈನ್‌ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ದ್ದಂತೆ ತಕ್ಷಣ  ಪ್ರತಿಕ್ರಿಯಿಸಿದ ಗೂಗಲ್‌ ವಕ್ತಾರರು, “ಸರ್ಜ್‌ ಎಂಜಿನ್‌ ಅನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿಲ್ಲ.  ಯಾವುದೇ ರಾಜಕೀಯ ಸಿದ್ಧಾಂತದ ಪರ ಅಥವಾ ವಿರುದ್ಧ ವರ್ತಿಸುವುದಿಲ್ಲ. ಹೀಗಾಗಿ ಆರೋಪ ನಿರಾಧಾರ” ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ