ನವದೆಹಲಿ: ಕೊರೋನಾವೈರಸ್ ಹರಡುವಿಕೆ ತಡೆಯಲು ದೇಶದಾದ್ಯಂತ ವಿಧಿಸಲಾಗಿರುವ 21 ದಿನಗಳ ಲಾಕ್ ಡೌನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
ಕೊರೋನಾ ಹರಡುವಿಕೆ ತಡೆಯಲು ಲಾಕ್ ಡೌನ್ ಒಂದೇ ಸಾಲದು ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಬ್ಲ್ಯುಎಚ್ಒ ನಿರ್ದೇಶಕ ಮೈಕ್ ರ್ಯಾನ್ ಹೇಳಿದ್ದಾರೆ.
‘ಲಾಕ್ ಡೌನ್ ಒಂದೇ ಸಾಲದು. ಸರಿಯಾದ ಚಿಕಿತ್ಸಾ ಘಟಕಗಳು, ರೋಗ ಪತ್ತೆ ಹಚ್ಚುವ ವಿಧಾನಗಳು, ರೋಗಿಗಳನ್ನು ಪ್ರತ್ಯೇಕವಾಗಿರಿಸಲು ಅತ್ಯುತ್ತಮ ಸೌಲಭ್ಯಗಳು ಇರಬೇಕು’ ಎಂದು ಮೈಕ್ ಹೇಳಿದ್ದಾರೆ.