ಎಲಿಜಬೆತ್ ಕೊಹಿನೂರು ಯಾರ ಪಾಲು?

ಬುಧವಾರ, 9 ಫೆಬ್ರವರಿ 2022 (06:02 IST)
ಲಂಡನ್ : 800 ವರ್ಷಗಳ ಭಾರತದ ಇತಿಹಾಸ ಹೊಂದಿರುವ ಕೊಹಿನೂರು ವಜ್ರ 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು.

ಈ ಬೆಲೆಬಾಳುವ ವಜ್ರ ಹೊಂದಿರುವ ಕಿರೀಟ ರಾಣಿ ಎಲಿಜಬೆತ್ 2ರ ಬಳಿಕ ಯಾರಿಗೆ ಹಸ್ತಾಂತರಿಸಲಿದ್ದಾರೆ ಎಂಬುದರ ಬಗ್ಗೆ ಇತ್ತೀಚೆಗೆ ವರದಿಯಾಗಿದೆ.

ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾಲ್ರ್ಸ್ ಮುಂದಿನ ವರ್ಷ ಉತ್ತರಾಧಿಕಾರವನ್ನು ವಹಿಸಿಕೊಳ್ಳಿದ್ದು, ಅವರ ಪತ್ನಿ ಡಚೆಸ್ ಆಫ್ ಕಾರ್ನ್ವಾಲ್ ಕ್ಯಾಮಿಲ್ಲಾ ವಿಶ್ವಪ್ರಸಿದ್ಧ ಕೊಹಿನೂರು ವಜ್ರವಿರುವ ಕಿರೀಟವನ್ನು ತೊಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಇಂಗ್ಲೆಂಡ್ ರಾಣಿಗೆ ಸೇರಿರುವ ಕಿರೀಟ ಪ್ಲಾಟಿನಂ ನಿಂದ ಮಾಡಲ್ಪಟ್ಟಿದೆ. ವಿಶ್ವ ವಿಖ್ಯಾತ ಕೊಹಿನೂರು ವಜ್ರದೊಂದಿಗೆ 2,800 ವಜ್ರಗಳು ಈ ಕಿರೀಟದಲ್ಲಿದೆ.

ಪ್ರಿನ್ಸ್ ಚಾಲ್ರ್ಸ್ ರಾಜನಾದಾಗ ಡಚೆಸ್ ಕ್ಯಾಮಿಲ್ಲಾಗೆ ರಾಣಿ ಪತ್ನಿ ಎಂಬ ಬಿರುದನ್ನು ನೀಡಲಾಗುವುದು ಎಂದು ಇಂಗ್ಲೆಂಡ್ ರಾಣಿ ಇತ್ತೀಚೆಗೆ ಘೋಷಿಸಿದರು. ಪ್ರಿನ್ಸ್ ಚಾಲ್ರ್ಸ್ನ ಪಟ್ಟಾಭಿಷೇಕದ ಸಮಯದಲ್ಲಿ ರಾಣಿ ಪತ್ನಿಯಾಗಿ ಕ್ಯಾಮಿಲ್ಲಾಗೆ ಕೊಹಿನೂರ್ ಕಿರೀಟವನ್ನು ಹಸ್ತಾಂತರಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ