ಟಿ20 ವಿಶ್ವಕಪ್: ವಿಂಡೀಸ್ ಆಟಗಾರರ ಜೊತೆ ಮೈದಾನದಲ್ಲೇ ಮಂಡಿ ಊರಿ ಕುಳಿತ ಇಂಗ್ಲೆಂಡ್
ವಿಶೇಷವೆಂದರೆ ವಿಂಡೀಸ್ ಕ್ರಿಕೆಟಿಗರ ಈ ಅಭಿಯಾನಕ್ಕೆ ಇಂಗ್ಲೆಂಡ್ ಕ್ರಿಕೆಟಿಗರೂ ಸಾಥ್ ಕೊಟ್ಟರು. ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಕ್ರಿಕೆಟಿಗರೂ ಒಂದು ಮೊಣಕಾಲೂರಿ ಮೈದಾನದಲ್ಲಿ ಕೂತು ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲವೂ ಇದೆ ಎಂದು ಸೂಚಿಸಿದರು.
ಇನ್ನು, ವಿಂಡೀಸ್ ಮತ್ತು ಇಂಗ್ಲೆಂಡ್ ಕ್ರಿಕೆಟಿಗರ ಈ ಅಭಿಯಾನ ನೋಡಿ ಖುಷಿಗೊಂಡ ಪ್ರೇಕ್ಷಕರೂ ತಾವೂ ಭಾರೀ ಕರಾಡತನದ ಮೂಲಕ ಚಿಯರ್ ಅಪ್ ಮಾಡಿದ್ದು ವಿಶೇಷವಾಗಿತ್ತು.