ಹಸುಗಳನ್ನು ಕೊಲ್ಲಲು ನ್ಯೂಜಿಲ್ಯಾಂಡ್ ನಿರ್ಧಾರ ಮಾಡಿದ್ದಾದರೂ ಏಕೆ…?

ಬುಧವಾರ, 30 ಮೇ 2018 (06:57 IST)
ನ್ಯೂಜಿಲ್ಯಾಂಡ್ : ಹೈನುಗಾರಿಕೆಯ ಉದ್ಯಮ ಮಾಡುತ್ತಿರುವ ನ್ಯೂಜಿಲ್ಯಾಂಡ್ ಇದೀಗ ಅಲ್ಲಿನ ಹಸುಗಳನ್ನು ಕೊಲ್ಲುವ ನಿರ್ಧಾರ ಮಾಡಿದೆ.


ಹೈನುಗಾರಿಕೆ ನ್ಯೂಜಿಲ್ಯಾಂಡ್ ನಲ್ಲಿ ಅತ್ಯಂತ ಲಾಭದಾಯಕ ಉದ್ಯಮವಾಗಿದ್ದರೂ ಕೂಡ ಹೈನೋದ್ಯಮಕ್ಕೆ ಮಾರಕ ಎನಿಸಿರುವ ಬ್ಯಾಕ್ಟೀರಿಯಾ ಒಂದನ್ನು ಸಂಪೂರ್ಣವಾಗಿ ನಾಶ ಪಡಿಸುವ ಸಲುವಾಗಿ 1.5ಲಕ್ಷ ಹಸುಗಳನ್ನು ಕೊಲ್ಲಲು ತೀರ್ಮಾನಿಸಿದೆ. ಈಗಾಗಲೇ 24ಸಾವಿರ ಹಸುಗಳನ್ನು ಕೊಲ್ಲಲಾಗಿದೆ.


ದೇಶದಲ್ಲಿರುವ 38ಹಸು ಪಾರ್ಮ್ ಗಳಲ್ಲಿ ಈಗಾಲೇ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕಾಯಿಲೆಯಿರುವ ಹಸುಗಳ ಜೊತೆಗೆ ಆರೋಗ್ಯವಂತ ಹಸುಗಳನ್ನು ಕೂಡ ಕೊಲ್ಲಲಾಗುತ್ತಿದೆ. 2ವರ್ಷದ ಒಳಗೆ ಇದನ್ನು ಪೂರ್ಣ ಮಾಡಲು ನ್ಯೂಜಿಲ್ಯಾಂಡ್ ತೀರ್ಮಾನಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ