3ನೇ ಮದುವೆಯಾಗಲು ಹಸೆಮಣೆ ಏರಿದ ಪತಿಗೆ ಮೊದಲ ಪತ್ನಿಯಿಂದ ಧರ್ಮದೇಟು
ಗುರುವಾರ, 13 ಫೆಬ್ರವರಿ 2020 (11:15 IST)
ಇಸ್ಲಾಮಾಬಾದ್ : ಪತ್ನಿಯರಿಬ್ಬರ ಕಣ್ಣು ತಪ್ಪಿಸಿ ಮೂರನೇ ಮದುವೆಯಾಗಲು ಹಸೆಮಣೆ ಏರಿದ ಪತಿಗೆ ಮೊದಲನೇ ಪತ್ನಿ ಮದುವೆ ಮಂಟಪಕ್ಕೆ ಬಂದು ಹಿಗ್ಗಾಮಗ್ಗಾ ಥಳಿಸಿದ ಘಟನೆ ಪಾಕಿಸ್ತಾನದ ಕರಾಚಿಯ ನಜಿಮಾಬಾದಿನಲ್ಲಿ ನಡೆದಿದೆ.
ರಫೀಕ್ ಎಂಬಾತನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಮೂರನೇ ಮದುವೆಯಾಗಲು ತಯಾರಿಗಿದ್ದ. ಈ ವಿಚಾರ ತಿಳಿದ ಮೊದಲನೇಯ ಪತ್ನಿ ತನ್ನ ಕುಟುಂಬಸ್ಥರೊಂದಿಗೆ ನೇರವಾಗಿ ಮದುವೆ ಮಂಟಪಕ್ಕೆ ಬಂದು ತನ್ನ ಪತಿಯನ್ನು ಹಿಗ್ಗಾಮಗ್ಗಾ ಥಳಿಸಿದ್ದಾಳೆ.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.