ಟ್ರಂಪ್ ಆದೇಶ ನೀಡಿದರೆ ಚೀನಾ ಮೇಲೆ ನ್ಯೂಕ್ಲಿಯರ್ ದಾಳಿಗೆ ಸಿದ್ಧ

ಶನಿವಾರ, 29 ಜುಲೈ 2017 (13:45 IST)
ಮೆಲ್ಬರ್ನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದರೆ ಮುಂದಿನ ವಾರವೇ ಚೀನಾ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸಲು ಸಿದ್ಧ ಎಂದು ಯುನೈಟೆಡ್ ಸ್ಟೇಟ್ಸ್ ನೌಕಾದಳದ ಕಮಾಂಡರ್ ಸ್ಕ್ವಾಟ್ ಸ್ವಿಫ್ಟ್ ತಿಳಿಸಿದ್ದಾರೆ.
 
ಆಸ್ಟ್ರೇಲಿಯಾದ ನ್ಯಾಷನಲ್ ಯೂನಿರ್ವಸಿಟಿಯಲ್ಲಿ ಭದ್ರತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸ್ಕ್ವಾಟ್ ಈ ಹೇಳಿಕೆ ನೀಡಿದ್ದಾರೆ. ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುವಂತೆ ಟ್ರಂಪ್ ಆದೇಶ ನೀಡಿದರೆ ನೀವು ಅದಕ್ಕೆ ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಸ್ಕಾಟ್ ಸ್ವಿಫ್ಟ್  ಹೌದು ಎಂದು ತಿಳಿಸಿದ್ದಾರೆ.
 
ಪ್ರತಿಯೊಬ್ಬರ ಅಮೆರಿಕ ಸೇನಾಪಡೆಯ ಪ್ರತಿಯೊಬ್ಬ ಯೋಧರು ವಿದೇಶಿ ಮತ್ತು ದೇಶಿಯ ಶತ್ರುಗಳ ವಿರುದ್ಧ ಹೋರಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷರು ನೀಡುವ ಆಜ್ಞೆಯನ್ನು ಅಧಿಕಾರಿಗಳು ಪಾಲಿಸಬೇಕಾಗುತ್ತದೆ ಎಂದು ಸ್ವಿಫ್ಟ್ ಹೇಳಿದರು.
 

ವೆಬ್ದುನಿಯಾವನ್ನು ಓದಿ