ಮದುವೆಯಾದ 10 ತಿಂಗಳ ನಂತರ ಪತ್ನಿಗೆ ತಿಳಿಯಿತು ಪತಿ ಗಂಡಲ್ಲ, ಹೆಣ್ಣು ಎಂದು!
ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳು ಡೇಟಿಂಗ್ ಆಪ್ ಮೂಲಕ ಹುಡುಗನನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದಳು. ತನ್ನ ಪತಿ ಬ್ಯುಸಿನೆಸ್ ಇದೆ, ವೈದ್ಯ ಎಂದೆಲ್ಲಾ ಖುಷಿಯಲ್ಲಿದ್ದಳು. ಆದರೆ ಮದುವೆಯಾದ ಮೇಲೆ ಪತಿ ಪತ್ನಿಯ ಮನೆಯಿಂದ ಸುಮಾರು 15 ಲಕ್ಷ ರೂ. ಪೀಕಿದ್ದ.
ಸುಮಾರು 10 ತಿಂಗಳು ಕಳೆದ ಮೇಲೆ ಮಹಿಳೆಗೆ ತಾನು ಮದುವೆಯಾಗಿರುವುದು ಪುರುಷನನ್ನಲ್ಲ. ಪುರುಷನ ರೂಪದಲ್ಲಿರುವ ಮಹಿಳೆಯನ್ನು ಎಂದು ಗೊತ್ತಾಗುತ್ತದೆ! ಶಾಕ್ ಆದ ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಮಹಿಳೆ ಗಂಡಿನ ವೇಷದಲ್ಲಿದ್ದ ತನ್ನ ಸಂಗಾತಿಯಿಂದ ದೂರವಾಗಿ ತವರು ಮನೆ ಸೇರಿದ್ದಾಳೆ.