ಒಳ ಉಡುಪು ಧರಿಸಿಲ್ಲವೆಂದು ಮಹಿಳೆಯನ್ನು ಕೆಲಸದಿಂದ ಕಿತ್ತು ಹಾಕಿದರು!

ಮಂಗಳವಾರ, 4 ಸೆಪ್ಟಂಬರ್ 2018 (09:30 IST)
ನವದೆಹಲಿ: ಮಹಿಳೆಯೊಬ್ಬರು ಒಳ ರವಿಕೆ ತೊಟ್ಟುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕಂಪನಿ ಮಾಲಿಕರು ಆಕೆಯನ್ನು ಕೆಲಸದಿಂದಲೇ ವಜಾಗೊಳಿಸಿದ ಘಟನೆ ಕೆನಡಾದಲ್ಲಿ ನಡೆದಿದೆ.

ಕಚೇರಿಗೆ ಬರುವಾಗ ಮಹಿಳೆಯರು ಒಳ ಉಡುಪು (ಬ್ರಾ) ಧರಿಸಿ ಬರುವುದು ಕಡ್ಡಾಯ. ಆದರೆ ನೀವು ಅದನ್ನು ಉಲ್ಲಂಘಿಸಿದ್ದೀರಿ ಎಂದು ಕಾರಣ ನೀಡಿ ಆಕೆ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಮಾಲಿಕರು ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.

ಇದರ ವಿರುದ್ಧ ಸಿಡಿದೆದ್ದಿರುವ ಮಹಿಳೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಇದು ಲಿಂಗ ತಾರತಮ್ಯಕ್ಕೆ ಸಮ. ಉಡುಪು ವಿಚಾರದಲ್ಲಿ ಮೇಲು ಕೀಳು ಮಾಡುವುದು ಸರಿಯಲ್ಲ ಎಂದು ಆಕೆ ಮಾನವ ಹಕ್ಕುಗಳ ಮೊರೆ ಹೋಗಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ