ಕ್ರಿಕೆಟಿಗ ಧೋನಿ ಹೆಸರು ಹೇಳಿಕೊಂಡು ಮಹಿಳೆಗೆ ದೋಖಾ

ಸೋಮವಾರ, 3 ಸೆಪ್ಟಂಬರ್ 2018 (09:47 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಅಮೆರಿಕಾ ನಿವಾಸಿ ಮಹಿಳೆಯೊಬ್ಬಳಿಗೆ ವಂಚನೆ ಮಾಡಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.

ಜ್ಯೋತಿ ರಂಜನ್ ಎಂಬ ವ್ಯಕ್ತಿ ತಾನು ಇಟೆಲಿವರ್ ಟೆಕ್ನೋಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಮಾಲಿಕ. ಕ್ರಿಕೆಟಿಗ ಧೋನಿ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎಂದು ಹೇಳಿಕೊಂಡು ಅಮೆರಿಕಾ ನಿವಾಸಿ ಭಾರತೀಯ ಮೂಲದ ಇಂಜಿನಿಯರ್ ಮಹಿಳೆಯಿಂದ 86 ಸಾವಿರ ಅಮೆರಿಕನ್ ಡಾಲರ್ ಕಬಳಿಸಿದ್ದ.

ಈತ ಕೆಲವು ಬಾರಿ ಅಮೆರಿಕಾಕ್ಕೆ ತೆರಳಿ ಆ ಮಹಿಳೆಯನ್ನು ಭೇಟಿಯಾಗಿ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನಂತೆ. ಒಂದು ಸಂದರ್ಭದಲ್ಲಿ ಈ ವಂಚಕ ಮಹಿಳೆ ಬಳಿ ಮತ್ತೆ ಐದು ಲಕ್ಷ ರೂ. ಗೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಮಹಿಳೆ ನೇರವಾಗಿ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ನಡೆಸಿದಾಗ ಈತ ಹೇಳಿದಂತೆ ಯಾವುದೇ ಕಂಪನಿಯೂ ಇಲ್ಲ, ಈತ ಹೇಳಿದ್ದೆಲ್ಲಾ ಸುಳ್ಳು ಎನ್ನುವುದು ಬಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ