ಒಂದೂವರೆ ಲಕ್ಷ ರೂ. ಐಫೋನ್ ಆರ್ಡರ್ ಮಾಡಿದ ಮಹಿಳೆಗೆ ಕಾದಿತ್ತು ಶಾಕ್!

ಮಂಗಳವಾರ, 8 ಫೆಬ್ರವರಿ 2022 (09:29 IST)
ಲಂಡನ್: ಆನ್ ಲೈನ್ ವ್ಯವಹಾರದಲ್ಲಿ ಎಷ್ಟೋ ಜನ ವಂಚನೆಗೊಳಗಾಗುವ ಬಗ್ಗೆ ಸುದ್ದಿಗಳನ್ನು ಓದಿರುತ್ತೀರಿ. ಇದೇ ರೀತಿಯ ಘಟನೆಯೊಂದು ಬ್ರಿಟನ್ ನಲ್ಲಿ ನಡೆದಿದೆ.

ಮಹಿಳೆಯೊಬ್ಬರು ಸ್ಥಳೀಯ ಆನ್ ಲೈನ್ ಮಾರುಕಟ್ಟೆಯಲ್ಲಿ 1.5 ಲಕ್ಷ ರೂ. ಮೌಲ್ಯದ ಐಫೋನ್ ಖರೀದಿ ಮಾಡಿದ್ದರು. ಕೆಲವು ದಿನಗಳ ಬಳಿಕ ಆರ್ಡರ್ ಕೈ ಸೇರಿತು.

ಆದರೆ ಕಟ್ಟು ಬಿಚ್ಚಿ ನೋಡಿದ ಮಹಿಳೆಗೆ ಶಾಕ್ ಕಾದಿತ್ತು. ಐಫೋನ್ ಬದಲು ಬಾಕ್ಸ್ ಒಳಗೆ ಒಂದು ಸೋಪ್ ಇತ್ತು! ಇದನ್ನು ನೋಡಿ ಶಾಕ್ ಆದ ಮಹಿಳೆ ಆನ್ ಲೈನ್ ಮಾರುಕಟ್ಟೆ ಸಂಸ್ಥೆಗೆ ದೂರು ನೀಡಿದ್ದಳು. ಇದರ ಬಗ್ಗೆ ತನಿಖೆ ನಡೆಸುವುದಾಗಿ ಕಂಪನಿ ಹೇಳಿದರೂ ಇದುವರೆಗೆ ಮಹಿಳೆಗೆ ಸೂಕ್ತ ಪರಿಹಾರ ದೊರೆತಿಲ್ಲವಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ