ಕೇಳಿದ್ರೆ ರಾಜೀನಾಮೆ ಕೊಡ್ತಿದ್ದೆ, ವಜಾ ಮಾಡ್ಬೇಕಿತ್ತಾ: ಸಿಎಂ ಬಳಿ ನೋವು ತೋಡಿಕೊಂಡ ರಾಜಣ್ಣ

Krishnaveni K

ಮಂಗಳವಾರ, 12 ಆಗಸ್ಟ್ 2025 (14:29 IST)
ಬೆಂಗಳೂರು: ಕೇಳಿದ್ರೆ ನಾನೇ ರಾಜೀನಾಮೆ ಕೊಡ್ತಿದ್ದೆ. ಆದರ ವಜಾ ಮಾಡಿದ್ದು ಯಾಕೆ ಎಂದು ಸಚಿವ ಸ್ಥಾನದಿಂದ ತಮ್ಮನ್ನು ಕಿತ್ತು ಹಾಕಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಬಳಿ ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ವಿರುದ್ಧ ಮಾತನಾಡಿದ್ದಕ್ಕೆ ಕೆಎನ್ ರಾಜಣ್ಣರನ್ನು ಸಚಿವ ಸಂಪುಟದಿಂದಲೇ ಕಿತ್ತು ಹಾಕಲಾಗಿದೆ. ತಮ್ಮ ಹೇಳಿಕೆ ಈ ಮಟ್ಟಿಗೆ ಮುಳುವಾಗಬಹುದು ಎಂಬ ಅಂದಾಜೂ ಅವರಿಗಿರಲಿಲ್ಲ. ಹೀಗಾಗಿ ಅವರು ಬೇಸರಗೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಕೆಎನ್ ರಾಜಣ್ಣರನ್ನು ರಾಹುಲ್ ಗಾಂಧಿ ಸೂಚನೆ ಮೇರೆಗೇ ಕಿತ್ತು ಹಾಕಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕೆಎನ್ ರಾಜಣ್ಣ ನೋವು ತೋಡಿಕೊಂಡಿದ್ದಾರೆ.

ಕೇಳಿದ್ದರೆ ನಾನೇ ರಾಜೀನಾಮೆ ಕೊಡ್ತಿದ್ದೆ. ವಜಾ ಮಾಡಿದ್ದು ಯಾಕೆ ಎಂದು ಬೇಸರಿಸಿಕೊಂಡಿದ್ದಾರೆ. ಇನ್ನು ಸಿಎಂ ಕೂಡಾ ರಾಜಣ್ಣರನ್ನು ಸಮಾಧಾನಿಸಿದ್ದು ಇದು ಹೈಕಮಾಂಡ್ ನಿರ್ಧಾರ. ನಾವು ಏನೂ ಮಾಡಂಗಿಲ್ಲ. ಆಗಿದ್ದನ್ನೆಲ್ಲಾ ಮರೆತುಬಿಡು ಎಂದು ಸಮಾಧಾನಿಸಿದ್ದಾರೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ