ಗರ್ಭಿಣಿಯಾದ ತಪ್ಪಿಗೆ ಮಹಿಳೆಯನ್ನು ಕೆಲಸದಿಂದ ಕಿತ್ತು ಹಾಕಿದರು!

ಗುರುವಾರ, 5 ಏಪ್ರಿಲ್ 2018 (12:03 IST)
ನವದೆಹಲಿ: ಕೆಲವೊಮ್ಮೆ ಖಾಸಗಿ ಸಂಸ್ಥೆಗಳ ನಿಯಮಗಳು ವಿಚಿತ್ರವಾಗಿ ತೋರಬಹುದು. ಇದೀಗ ಅಂತಹದ್ದೇ ವಿಚಿತ್ರ ನಿಯಮದಿಂದಾಗಿ ಜಪಾನ್ ನಲ್ಲಿ ಮಹಿಳೆಯೊಬ್ಬರು ಕೆಲಸದಿಂದ ವಜಾಗೊಂಡಿದ್ದಾರೆ! ಅದಕ್ಕೆ ಕಾರಣ ಆಕೆ ಗರ್ಭಿಣಿಯಾದುದು!

ಕೆಲಸದ ಒಪ್ಪಂದದ ಮೊದಲೇ ಗರ್ಭಿಣಿಯಾದ ತಪ್ಪಿಗೆ ಸಂಸ್ಥೆಯ ಬಾಸ್ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದ್ದಾರಂತೆ!ಉತ್ತರ ಜಪಾನ್ ನಲ್ಲಿ ಚೈಲ್ಡ್ ಕೇರ್ ಸಂಸ್ಥೆಯೊಂದರಲ್ಲಿ ನೌಕರರಳಾಗಿದ್ದ ಮಹಿಳೆ ಇದೀಗ ಕೆಲಸ ಕಳೆದುಕೊಂಡಿದ್ದಾಳೆ.

ಕೆಲಸಕ್ಕೆ ಸೇರುವಾಗ ಮತ್ತು ಕೆಲಸದಲ್ಲಿ ಇರುವಾಗಲೇ ಮದುವೆಯಾಗುವುದಾದರೆ ಗುತ್ತಿಗೆ ಅವಧಿ ಮುಗಿಯುವ ಮೊದಲು ಗರ್ಭಿಣಿಯಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗುತ್ತದಂತೆ. ಆದರೆ ಈ ಮಹಿಳೆ ಷರತ್ತು ಮುರಿದಳೆಂದು ಕೆಲಸ ಕಳೆದುಕೊಂಡಿದ್ದಾಳೆ. ಅಂದ ಹಾಗೆ ಮಹಿಳೆಯರಿಗೆ ಜಪಾನ್ ನಲ್ಲಿ ಇಂತಹ ಷರತ್ತಿನ ಕಿರಿ ಕಿರಿ ಸಾಮಾನ್ಯವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ