ಸ್ತ್ರೀಯರು ಜೀನ್ಸ್ ತೊಡುವುದರಿಂದ ನಪುಂಸಕ ಮಕ್ಕಳು ಹುಟ್ಟುತ್ತಾರಂತೆ!
ಹೀಗೊಂದು ವಿವಾದಾತ್ಮಕ ಹೇಳಿಕೆಯನ್ನು ಕೇರಳದ ಪ್ರಾದ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳ ಮುಂದೆ ಹೇಳಿದ್ದಾರೆ. ಪ್ರಾದ್ಯಾಪಕ ಡಾ. ರಂಜಿತ್ ಕುಮಾರ್ ಈ ರೀತಿ ಹೇಳಿಕೆ ನೀಡಿದ ಭೂಪ! ಇದೀಗ ಪ್ರೊಫೆಸರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೇರಳದ ಕಾಲಡಿಯಲ್ಲಿರುವ ಕಾಲೇಜೊಂದರಲ್ಲಿ ಪ್ರಾದ್ಯಾಪಕರಾಗಿರುವ ರಂಜಿತ್ ಕುಮಾರ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇಷ್ಟೆಲ್ಲಾ ರದ್ದಾಂತವಾದ ಬಳಿಕ ಕೇರಳದ ಆರೋಗ್ಯ ಸಚಿವೆ ಶೈಲಜಾ ಮಧ್ಯಪ್ರವೇಶಿಸಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.