ಜಗತ್ತಿಗೇ ಕೊರೋನಾ ಹರಡಿದ ವುಹಾನ್ ಈಗ ಸಂಪೂರ್ಣ ಸುರಕ್ಷಿತ

ಶುಕ್ರವಾರ, 5 ಜೂನ್ 2020 (11:59 IST)
ಬೀಜಿಂಗ್: ಜಗತ್ತಿಗೇ ಕೊರೋನಾ ಹರಡಿದ ಕುಖ್ಯಾತಿಗೊಳಗಾಗಿದ್ದ ಚೀನಾದ ವುಹಾನ್ ನಗರ ಈಗ ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿದ್ದು, ಸುರಕ್ಷಿತವಾಗಿದೆ.


ಕೊನೆಯದಾಗಿ ದಾಖಲಾಗಿದ್ದ ಮೂವರು ಕೊರೋನಾ ಸೋಂಕಿತರೂ ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ವುಹಾನ್ ಈಗ ಕೊರೋನಾ ಮುಕ್ತವಾಗಿದೆ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ.

ಇದುವರೆಗಾಗಿ ಚೀನಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 83,027 ತಲುಪಿದ್ದು, ಈ ಪೈಕಿ 78,327 ಮಂದಿ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ