ಮಾತುಕತೆಗೂ ಮುನ್ನವೇ ಗಡಿಯಲ್ಲಿ ಹಿಂದಡಿಯಿಟ್ಟ ಚೀನಾ

ಶುಕ್ರವಾರ, 5 ಜೂನ್ 2020 (10:40 IST)
ನವದೆಹಲಿ: ಅಧಿಕಾರಿಗಳ ಮಟ್ಟದ ಸಭೆಗೂ ಮುನ್ನವೇ ಲಡಾಖ್ ಗಡಿಯಲ್ಲಿ ಚೀನಾ ಕೊಂಚ ಮೃದು ಧೋರಣೆ ಅನುಸರಿಸಿದೆ. ಈ ಮೂಲಕ ಶಾಂತಿ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಿದೆ.


ವಾಸ್ತವ ರೇಖೆಗಿಂತ ಚೀನಾ ಸೇನೆ 2 ಕಿ.ಮೀ. ಹಿಂದೆ ಸರಿದಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಕೂಡಾ 1 ಕಿ.ಮೀ. ಹಿಂದಡಿಯಿಟ್ಟಿದೆ. ನಾಳೆ ಉಭಯ ದೇಶಗಳ ಲೆಫ್ಟಿನೆಂಟ್ ಜನರಲ್ ಅಧಿಕಾರಿಗಳ ಮಟ್ಟದ ಮಾತುಕತೆ ನಡೆಯಲಿದೆ.

ವಿವಾದಿತ ಪ್ರದೇಶವಾಗಿರುವ ಪ್ಯಾಂಗ್ಯಾಂಗ್ ಸರೋವರ ದಡದಲ್ಲೇ ಮಾತುಕತೆ ನಡೆಯಲಿದೆ. ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ