ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನು ಮುಂದೆ ಬದಲಿ ಆಟಗಾರನ ಬಳಕೆ

ಶುಕ್ರವಾರ, 5 ಜೂನ್ 2020 (10:11 IST)
ದುಬೈ: ಕೊರೋನಾವೈರಸ್ ನಿಂದಾಗಿ ಕ್ರಿಕೆಟ್ ನಲ್ಲೂ ಭಾರೀ ಬದಲಾವಣೆಯಾಗುತ್ತಿದೆ. ಈಗಾಗಲೇ ಐಸಿಸಿ ಬೌಲರ್ ಗಳು ಜೊಲ್ಲು ರಸ ಬಳಸುವುದನ್ನು ನಿಷೇಧಿಸಿತ್ತು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ ಬದಲಿ ಆಟಗಾರನ ಬಳಕೆ ಮಾಡುವ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ.


ಒಂದು ವೇಳೆ ಟೆಸ್ಟ್ ಪಂದ್ಯದ ನಡುವೆ ಒಬ್ಬ ಆಟಗಾರನಿಗೆ ಕೊರೋನಾ ಇರುವುದು ದೃಢಪಟ್ಟರೆ ಆತನ ಬದಲು ಇನ್ನೊಬ್ಬ ಆಟಗಾರನನ್ನು ಬಳಸಲು ಅವಕಾಶ ನೀಡುವ ಹೊಸ ನಿಯಮ ತರಲು ಐಸಿಸಿ ಚಿಂತನೆ ನಡೆಸಿದೆ.

ಇದು ಚರ್ಚೆಯ ಹಂತದಲ್ಲಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಈ ನಿಯಮ ಜಾರಿಗೆ ಬರಲಿದೆ. ಏಕದಿನ ಮತ್ತು ಟಿ20 ಪಂದ್ಯಗಳಿಗೆ ಈ ನಿಯಮ ಅಗತ್ಯ ಬರುವುದಿಲ್ಲ. ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ