ಕೊನೆಗೂ ಮಾಲ್ಡೀವ್ಸ್ ಮೇಲೆ ಹೇರಿದ್ದ 45 ದಿನಗಳ ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆದ ಯಾಮೀನ್

ಶುಕ್ರವಾರ, 23 ಮಾರ್ಚ್ 2018 (12:04 IST)
ಮಾಲ್ಡೀವ್ಸ್: ಮಾಲ್ಡೀವ್ಸ್ ಮೇಲೆ ಹೇರಿದ್ದ 45 ದಿನಗಳ ತುರ್ತುಪರಿಸ್ಥಿತಿ ಆದೇಶವನ್ನು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ವಾಪಸ್ ಪಡೆದಿದ್ದಾರೆ.


ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ತಿರಸ್ಕರಿಸಿದ ಯಾಮಿನ್, ಫೆ.5 ರಂದು ತುರ್ತುಪರಿಸ್ಥಿತಿ ಹೇರಿದ್ದರು. 45 ದಿನಗಳ ನಂತರ ಯಾಮೀನ್ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಸರ್ವಾಧಿಕಾರಿಯಂತೆ ಯಾಮೀನ್ ತೆಗೆದುಕೊಂಡ ಈ ನಿರ್ಧಾರವನ್ನು  ಭಾರತ, ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಖಂಡಿಸಿದ್ದವು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ