ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರ ವಿರುದ್ಧ ಸಿಟ್ಟಾದ ಸಚಿನ್ ತೆಂಡುಲ್ಕರ್ ; ನಿತಿನ್ ಗಡ್ಕರಿಗೆ ಪತ್ರ

ಬುಧವಾರ, 21 ಮಾರ್ಚ್ 2018 (07:05 IST)
ನವದೆಹಲಿ : ಇತ್ತಿಚೆಗೆ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವವರಲ್ಲಿ ಬೈಕ್ ಸವಾರರ ಸಂಖ್ಯೆ ಅತಿ ಹೆಚ್ಚಾಗಿದ್ದು, ಇದಕ್ಕೆ ಕಾರಣ ಅವರು ಧರಿಸಿರುವ ಕಳಪೆ ಗುಣಮಟ್ಟದ ಹಲ್ಮೆಟ್ ಗಳಾಗಿವೆ. ಈ ಬಗ್ಗೆ ಮನಗೊಂಡ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸಚಿನ್ ತೆಂಡುಲ್ಕರ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.


ಈ ಪತ್ರದಲ್ಲೆ ಅವರು,’ ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಪಘಾತಕ್ಕೆ ತುತ್ತಾಗುತ್ತಿರುವುದು ದ್ವಿಚಕ್ರ ವಾಹನ ಸವಾರರು. ಹೀಗಾಗಿ ಹೆಲ್ಮೆಟ್ ಗುಣಮಟ್ಟ ಉತ್ತಮವಾಗಿರಬೇಕು. ನಿಮ್ಮ ಇಲಾಖೆ ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಕರ ಹಾಗೂ ಸುಳ್ಳು ಐಎಸ್ಐ ಮಾರ್ಕ್ ಹಾಕಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಒಬ್ಬ ಆಟಗಾರನಾಗಿ ಗುಣಮಟ್ಟದ ಹೆಲ್ಮೆಟ್ ಬಗ್ಗೆ ನನಗೆ ಅರಿವಿದೆ’ ಎಂದು ತಿಳಿಸಿದ್ದಾರೆ.


‘ಭಾರತದಲ್ಲಿ ಸುಮಾರು 70% ರಷ್ಟು ಬೈಕ್ ಸವಾರರು ಕಳಪೆ ಹೆಲ್ಮೆಟ್ ಖರೀದಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ದ್ವಿಚಕ್ರ ಸವಾರರು ಎಚ್ಚೆತ್ತುಕೊಳ್ಳುವ ಸಮಯ. 2016ರ ಅಪಘಾತದಲ್ಲಿ ಶೇ.30 ಮಂದಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ತುತ್ತಾಗಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ಶೇ.42% ಬೈಕ್ ಸವಾರರು ಅಪಘಾತದಿಂದ ಚೇತರಿಸಿಕೊಳ್ಳಬಹುದು’ ಎಂದು ಬೈಕ್ ಸವಾರರ ಬಗ್ಗೆ ತಮ್ಮ  ಕಳಕಳಿ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ