ಕೊಚ್ಚಿಯಲ್ಲಿ ಟೀಂ ಇಂಡಿಯಾ ಪಂದ್ಯ ಆಯೋಜಿಸುವುದಕ್ಕೆ ಸಂಸದ ಶಶಿ ತರೂರ್ ವಿರೋಧವೇಕೆ?!

ಬುಧವಾರ, 21 ಮಾರ್ಚ್ 2018 (09:23 IST)
ಕೊಚ್ಚಿ: ತಿರುವನಂತಪುರಂ ಸಂಸದ ಶಶಿ ತರೂರ್ ಮುಂಬರುವ ನವಂಬರ್ ನಲ್ಲಿ ಕೊಚ್ಚಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಸಲುದ್ದೇಶಿಸಿರುವ ಏಕದಿನ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
 

ತರೂರ್ ಟ್ವಿಟರ್ ನಲ್ಲಿ ವಿರೋಧ ವ್ಯಕ್ತಪಡಿಸಿರುವುದಕ್ಕೆ ಹಲವರು ಅವರನ್ನು ಬೆಂಬಲಿಸಿದ್ದಾರೆ. ಈ ವಿರೋಧಕ್ಕೆ ಬಲವಾದ ಕಾರಣವೂ ಇದೆ. ಕೊಚ್ಚಿಯಲ್ಲಿ ಈಗ ಫುಟ್ ಬಾಲ್ ಪಂದ್ಯಕ್ಕೆ ಬೇಕಾದ ಟರ್ಫ್ ಸಿದ್ಧಪಡಿಸಲಾಗಿದೆ. ಈಗ ಕ್ರಿಕೆಟ್ ಪಂದ್ಯ ಆಯೋಜಿಸಬೇಕಾದರೆ ಈ ಮೈದಾನ ಅಗೆದು ಪಿಚ್ ನಿರ್ಮಿಸಬೇಕು.

ಕೇರಳದಲ್ಲಿ ಕ್ರಿಕೆಟ್ ಗಿಂತ ಫುಟ್ ಬಾಲ್ ಹೆಚ್ಚು ಜನಪ್ರಿಯ. ಒಂದು ವೇಳೆ ಕ್ರಿಕೆಟ್ ಪಂದ್ಯ ಆಯೋಜಿಸಬೇಕಾದರೆ ತಿರುವನಂತಪುರಂನ ಮೈದಾನದಲ್ಲಿ ಕ್ರಿಕೆಟ್ ಪಿಚ್ ಸಿದ್ಧವಿದೆ. ಅಲ್ಲಿಯೇ ಆಯೋಜಿಸುವ ಬದಲು ದಿಡೀರ್ ಎಂದು ಕೊಚ್ಚಿಗೆ ಪಂದ್ಯ ವರ್ಗಾಯಿಸಿರುವುದರ ಒಳಮರ್ಮವೇನೆಂದು ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅನುಮಾಸ್ಪದ ನಿರ್ಧಾರದಿಂದ ಯಾರಿಗೆ ಲಾಭ ಎಂದು ಅವರು ಟ್ವಿಟರ್ ನಲ್ಲಿ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ