ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದ ಅಮೆರಿಕ..!

ಮಂಗಳವಾರ, 1 ಮಾರ್ಚ್ 2022 (09:22 IST)
ವಾಷಿಂಗ್ಟನ್ : ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. 6ನೇ ದಿನ ವಾದ ಇಂದು ಯುದ್ಧ ಪೀಡಿತ ಉಕ್ರೇನ್ನಲ್ಲಿ ಪರಿಸ್ಥಿತಿ ತೀವ್ರ್ರ ಹದಗಣೆಟ್ಟಿದೆ.

 ಊಟ, ವಸತಿ ಇಲ್ಲದೆ ಪರದಾಡುವಂತಾದರೆ. ಇತ್ತ ವಿದ್ಯಾಭ್ಯಾಸ ಹಾಗೂ ಇನ್ನಿತರ ಕೆಲಸ ನಿಮಿತ್ತ ಉಕ್ರೇನ್ನಲ್ಲಿ ನೆಲೆಸಿರುವವರನ್ನು ಮತ್ತೇ ಅವರ ದೇಶಗಳಿಗೆ ವಾಪಸ್ ಕರೆತರುವುದು ಒಂದು ಚಾಲೆಂಜಿಂಗ್ ಆಗಿದೆ.

ಭಾರತ ಸರ್ಕಾರ ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಸಾಕಷ್ಟು ಕ್ರಮಕೈಗೊಂಡ ಹೊರತಾಗಿಯೂ ವಿಪಕ್ಷಗಳಿಂದ ಟೀಕೆಗೆ ತುತ್ತಾಗಿದ್ದರೆ, ಇತ್ತ ಅಮೆರಿಕ ಸರ್ಕಾರ ಉಕ್ರೇನ್ನಲ್ಲಿ ಸಿಕ್ಕಿ ಬಿದ್ದಿರುವ ತನ್ನ ನಾಗರಿಕರ ತೆರವು ಕಾರ್ಯಾಚರಣೆ ತನ್ನ ಹೊಣೆಯಲ್ಲ ಎಂದು ಹೇಳಿದೆ.

ಭಾರತಕ್ಕೆ ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಆರನೇ ವಿಮಾನ ಆಗಮಿಸಿದ್ದು, ಕರ್ನಾಟಕದ ಹಲವು ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಗಂಗಾ ಮಿಷನ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಎರ್ಲಿಫ್ಟ್ ಮಾಡಿ ಸುರಕ್ಷೀತವಾಗಿ ಅವರನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ