ಭಾರೀ ಬಡ್ಡಿದರ ಏರಿಸಿದ ರಷ್ಯನ್ ಬ್ಯಾಕ್?

ಸೋಮವಾರ, 28 ಫೆಬ್ರವರಿ 2022 (20:20 IST)
ಮಾಸ್ಕೋ : ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದ ವಿದೇಶೀ ವಿನಿಮಯಕ್ಕೆ ಭಾರೀ ಹೊಡೆತ ಬಿದ್ದಿದೆ.
 
ಹೀಗಾಗಿ ರಷ್ಯಾ ಸೆಂಟ್ರಲ್ ಬ್ಯಾಂಕ್ ತನ್ನ ಆರ್ಥಿಕತೆಯನ್ನು ಕಾಪಾಡಲು ಬಡ್ಡಿ ದರದಲ್ಲಿ ಭಾರೀ ಏರಿಕೆ ಮಾಡಿದೆ. ರಷ್ಯಾ ಸೆಂಟ್ರಲ್ ಬ್ಯಾಂಕ್ನ ಬಡ್ಡಿ ದರ ಈ ಹಿಂದೆ ಶೇ.9.5 ಇದ್ದು, ಇದೀಗ ಶೇ.20 ಕ್ಕೆ ಏರಿಕೆ ಮಾಡಿದೆ. ಈ ಮೂಲಕ ರಷ್ಯಾ ತನ್ನ ಹೂಡಿಕೆದಾರರನ್ನು ಕಾಪಾಡಲು ಪ್ರಯತ್ನಿಸುತ್ತಿದೆ.

ರಷ್ಯಾ ಸೆಂಟ್ರಲ್ ಬ್ಯಾಂಕ್ ಸೋಮವಾರ ಪ್ರಮುಖ ಬಡ್ಡಿ ದರವನ್ನು ಶೇ.9.5 ರಿಂದ ಶೇ.20ಕ್ಕೆ ಏರಿಸುವುದಾಗಿ ಘೋಷಿಸಿದೆ.

ರಷ್ಯಾದಲ್ಲಿ ಯುದ್ಧದ ಹಿನ್ನೆಲೆ ವಿದೇಶೀ ವಹಿವಾಟು ಕುಂಠಿತಗೊಂಡಿದ್ದು, ರೂಬೆಲ್(ರಷ್ಯಾ ಕರೆನ್ಸಿ) ಬೆಲೆ ಕುಸಿಯುತ್ತಿದೆ. ಈ ಹಣದುಬ್ಬರವನ್ನು ಸರಿದೂಗಿಸಲು ಬಡ್ಡಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. 

ಯುದ್ಧ ಪ್ರಾರಂಭವಾದಾಗಿನಿಂದ ರೂಬೆಲ್ ಮೌಲ್ಯ ಕುಸಿಯತೊಡಗಿದೆ. ಪ್ರತಿ ಡಾಲರ್ಗೆ ರೂಬೆಲ್ ಬೆಲೆ 119.50 ರಷ್ಟು ಕುಸಿದಿದೆ. ಶುಕ್ರವಾರದ ದಿಂದ ರೂಬೆಲ್ ಬೆಲೆ ಶೇ.30% ರಷ್ಟು ಕಡಿಮೆಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ