‘ಆರ್ ಸಿಬಿ ಸೋಲಿಗೆ ನಾನೇ ಕಾರಣ’

ಮಂಗಳವಾರ, 11 ಏಪ್ರಿಲ್ 2017 (10:12 IST)
ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂರ್ಸ್ ಬೆಂಗಳೂರು ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಏಕಮಾತ್ರ ಗೆಲುವು ದಾಖಲಿಸಿದೆ. ತಂಡದ ಸೋಲಿಗೆ ನಾನೇ ಕಾರಣ ಎಂದು ಹಂಗಾಮಿ ನಾಯಕ ಶೇನ್ ವ್ಯಾಟ್ಸನ್ ಹೇಳಿಕೊಂಡಿದ್ದಾರೆ.

 
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವ ವಹಿಸಿರುವ ವ್ಯಾಟ್ಸನ್, ಸೋಲಿಗೆ ಬೇರೆ ಯಾರನ್ನೂ ಹೊಣೆ ಮಾಡಬೇಡಿ ಎಂದಿದ್ದಾರೆ. ಸ್ವತಃ ವ್ಯಾಟ್ಸನ್ ಬ್ಯಾಟ್ ನಿಂದ ಮೋಡಿ ಮಾಡಿಲ್ಲ.

ಪಂಜಾಬ್ ವಿರುದ್ಧ8 ವಿಕೆಟ್ ಸೋಲುಂಡ ಬಳಿಕ ಅವರು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಆರಂಭಿಕರಾಗಿರುವ ವ್ಯಾಟ್ಸನ್ ತಾನು ಬೇಗನೇ ವಿಕೆಟ್ ಒಪ್ಪಿಸುತ್ತಿರುವುದರಿಂದ ತಂಡ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ ಆರ್ ಸಿಬಿ ಆರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ