ಪಂಜಾಬ್ ವಿರುದ್ಧ ಸ್ಫೋಟಕ ಆಟಕ್ಕೆ ಎಬಿಡಿಗೆ ಸ್ಫೂರ್ತಿ ತುಂಬಿದ್ದೇ ಪತ್ನಿ

ಮಂಗಳವಾರ, 11 ಏಪ್ರಿಲ್ 2017 (16:52 IST)
ಗಾಯದಿಂದ ಚೇತರಿಸಿಕೊಂಡ ಬಳಿಕ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್`ಮನ್ ಎಬಿಡಿವಿಲಿಯರ್ಸ್ ಐಪಿಎಲ್`ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಪಂಜಾಬ್ ವಿರುದ್ಧ 46 ಎಸೆತಗಳಲ್ಲಿ 89 ರನ್ ಸಿಡಿಸಿದ ಎಬಿಡಿ ಕುಸಿಯುತ್ತಿದ್ದ ಆರ್ಸಿಬಿಗೆ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು. ಇದರಲ್ಲಿ ಅಮೋಘ 9 ಸಿಕ್ಸರ್`ಗಳಿದ್ದವು.

ಅಂದಹಾಗೆ, ಈ ಪಂದ್ಯದಲ್ಲಿ ನಾನು ಹೀಗೆ ಆಡುತ್ತೇನೆಂಬ ಬಗ್ಗೆ ಸ್ವತಃ ಎಬಿಡಿಗೆ ನಂಬಿಕೆ ಇರಲಿಲ್ಲವಂತೆ. ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಕಾಡತ್ತಂತೆ. ಇದನ್ನ ಸರಿಪಡಿಸಿದವರು ಅವರ ಪತ್ನಿಯಂತೆ. ಪಂಜಾಬ್ ಚೇಸಿಂಗ್ ವೇಳೆ ಕಾಮೆಂಟೇಟರ್ಸ್ ಜೊತೆ ಇಯರ್ ಫೋನಿನಲ್ಲಿ ಮಾತನಾಡಿದ ಎಬಿಡಿ ಈ ವಿಷಯ ಬಿಚ್ಚಿಟ್ಟಿದ್ದಾರೆ.

ನಾನು ಹೊಡೆದ ಶಾಟ್`ಗಳು ನನಗೆ ಅಚ್ಚರಿ ಹುಟ್ಟಿಸಿವೆ. ಇದು ನಿಜವಾಗಿಯೂ ಮಾನಸಿಕ ವಿಚಾರ. ಕಳೆದ ಕೆಲ ದಿನಗಳಿಂದ ನನಗೆ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಅನುಮಾನ ಕಾಡುತ್ತಿದ್ದವು. ಪಂದ್ಯಕ್ಕೂ ಮುನ್ನ ನನ್ನ ಪತ್ನಿಗೆ ಕರೆ ಮಾಡಿದ್ದೆ. ನನ್ನ ಬಗ್ಗೆ ಅನುಮಾನ ಕಾಡುತ್ತಿದೆ, ನನಗೆ ನಿನ್ನ ಅಡ್ವೈಸ್ ಬೇಕೆಂದು ಹೇಳಿದ್ದೆ. ನನ್ನ ಮಗುವಿನ ಜೊತೆ ಮಲಗಿದ್ದ ಅವಳು ಕೆಲ ನಿಮಿಷಗಳ ಬಳಿಕ ಫೋನ್ ಮಾಡುವುದಾಗಿ ಹೇಳಿದಳು.

ಬಳಿಕ ಕರೆಮಾಡಿದ ನನ್ನ ಪತ್ನಿ, ಸಮಾಧಾನದಿಂದ ಇರುವಂತೆ ಹೇಳಿದ್ದಳು. ನಾನು ಅಲ್ಲಿಗೆ ಬರುತ್ತಿರುವುದಾಗಿ ಹೇಳಿದಳು. ಅದೇ ನನಗೆ ಸ್ಫೂರ್ತಿಯಾಯ್ತು. ಹೀಗಾಗಿ, ನನಗೇ ಅಚ್ಚರಿಯಾಗುವಂಥಾ ಶಾಟ್`ಗಳನ್ನ ಹೊಡೆದೆ ಎಂದು ಎಬಿಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ