ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಮಾಧ್ಯಮ ಕೊಟ್ಟ ತಪರಾಕಿ

ಗುರುವಾರ, 30 ಮಾರ್ಚ್ 2017 (08:58 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಮುಗಿದ ಮೇಲೂ ಆಸೀಸ್ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಮುಗಿ ಬೀಳುವುದನ್ನು ನಿಲ್ಲಿಸಿಲ್ಲ. ನಿನ್ನೆಯಷ್ಟೇ ಆಸೀಸ್ ಕ್ರಿಕೆಟಿಗರ ಜತೆ ಸ್ನೇಹ ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡಿವೆ.

 

ಕೊಹ್ಲಿ ವರ್ತನೆ ಬಾಲಿಶ ಮತ್ತು ತೂಕವಿಲ್ಲದದ್ದು ಎಂದು ಆಸೀಸ್ ಮಾಧ್ಯಮಗಳು ಕಿಡಿ ಕಾರಿವೆ. ಅಲ್ಲದೆ ಆಸೀಸ್ ತಂಡ ಬೀರ್ ಪಾರ್ಟಿಗೆ ಆಹ್ವಾನಿಸಿ ಸ್ನೇಹ ಹಸ್ತ ಚಾಚಿದಾಗಲೂ ತಳ್ಳಿ ಹಾಕಿದ ಕೊಹ್ಲಿ ವರ್ತನೆಯನ್ನು ಮಾಧ್ಯಮಗಳು ಖಂಡಿಸಿವೆ.

 
ವಿರಾಟ್ ಕೊಹ್ಲಿ ತಮ್ಮ ವರ್ತನೆಗೆ ಕ್ಷಮೆ ಕೇಳಬಹುದಿತ್ತು. ಆದರೆ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅದನ್ನು ಮಾಡಿದರು. ಸರಣಿ ಮುಗಿದ ಮೇಲಾದರೂ ತಮ್ಮ ವೈರತ್ವ ಮರೆತು ಮಾತನಾಡಿದ್ದರೆ, ಕೊಹ್ಲಿ ಶ್ರೇಷ್ಠವೆನಿಸಿಕೊಳ್ಳುತ್ತಿದ್ದರು ಎಂದು ಮಾಧ್ಯಮಗಳು ಜರೆದಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ