ಪುಣೆ ಗೆಲುವಿಗೆ ಸಂಭ್ರಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು!

ಗುರುವಾರ, 18 ಮೇ 2017 (08:42 IST)
ಪುಣೆ: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಪುಣೆ ಸೂಪರ್ ಜೈಂಟ್ ಗೆ ಪುಣೆ ಅಭಿಮಾನಿಗಳು ಎಷ್ಟು ಸಂಭ್ರಮಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಾತ್ರ ಸಂಭ್ರಮಿಸುತ್ತಿದ್ದಾರೆ.

 
ಇದಕ್ಕೆಲ್ಲಾ ಕಾರಣ ಧೋನಿ! ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿ ತಮ್ಮವರೇ ಎಂಬ ಭಾವನೆ ಚೆನ್ನೈ ಅಭಿಮಾನಿಗಳದ್ದು. ಹೀಗಾಗಿ ಧೋನಿ ಯಾವ ತಂಡದಲ್ಲಿದ್ದರೂ ಸರಿಯೇ. ತಮ್ಮ ಬೆಂಬಲ ಅವರಿಗೆ ಎಂದಿದ್ದಾರೆ.

ಹಾಗಾಗಿ ಮುಂಬೈ ವಿರುದ್ಧ ಪುಣೆ ಗೆದ್ದಿದ್ದಕ್ಕೆ ಚೆನ್ನೈ ಅಭಿಮಾನಿಗಳು ಇನ್ನಿಲ್ಲದಂತೆ ಸಂಭ್ರಮಿಸಿದ್ದಾರೆ. ಧೋನಿಯಿದ್ದರೆ ಫೈನಲ್ ಗೆಲುವು ಗ್ಯಾರಂಟಿ ಎಂಬರ್ಥದ ಟ್ವೀಟ್ ಗಳು ಟ್ವಿಟರ್ ನಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ