ರಿಕಿ ಪಾಂಟಿಂಗ್ ಐಪಿಎಲ್ ತಂಡಕ್ಕೆ ಧೋನಿ ನಾಯಕ

ಶನಿವಾರ, 13 ಮೇ 2017 (09:41 IST)
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಆಲ್ ಟೈಮ್ ಬೆಸ್ಟ್ ಐಪಿಎಲ್ ತಂಡ ಪ್ರಕಟಿಸಿದ್ದು ಧೋನಿಗೆ ನಾಯಕನ ಪಟ್ಟ ನೀಡಿದ್ದಾರೆ.

 
ಮುಂಬೈ ಇಂಡಿಯನ್ಸ್ ತಂಡ ಆಟಗಾರನಾಗಿದ್ದ ಪಾಂಟಿಂಗ್ ತಮ್ಮ ಕನಸಿನ ತಂಡದಲ್ಲಿ ಏಳು ಭಾರತೀಯ ಮತ್ತು 4 ವಿದೇಶೀ ಆಟಗಾರರಿಗೆ ಸ್ಥಾನ ನಿಡಿದ್ದಾರೆ. ವಿರಾಟ್ ಕೊಹ್ಲಿ, ಅಮಿತ್ ಮಿಶ್ರಾ,  ಆಶಿಷ್ ನೆಹ್ರಾ, ರೋಹಿತ್ ಶರ್ಮಾ,  ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಪಾಂಟಿಂಗ್ ತಂಡದಲ್ಲಿ ಸ್ಥಾನ ಪಡೆದ ಇತರ ಭಾರತೀಯರು.

ಇವರಲ್ಲದೆ ಆರ್ ಸಿಬಿ ತಂಡದ ಕ್ರಿಸ್ ಗೇಲ್,  ಹೈದರಾಬಾದ್ ನ ಡೇವಿಡ್ ವಾರ್ನರ್, ಗುಜರಾತ್ ತಂಡದ ಡ್ವಾನ್ ಬ್ರಾವೋ ಮತ್ತು ಮುಂಬೈ ಇಂಡಿಯನ್ಸ್ ನ ಲಸಿತ್ ಮಾಲಿಂಗ್ ಕೂಡಾ ಬೆಸ್ಟ್ 11 ರ ಬಳಗದಲ್ಲಿದ್ದಾರೆ.

ವಿಶೇಷವೆಂದರೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಕನಸಿನ ತಂಡದಲ್ಲಿ ಧೋನಿಗೆ ನಾಯಕನ ಸ್ಥಾನ ಬಿಡಿ, ಸ್ಥಾನವೇ ನೀಡಿರಲಿಲ್ಲ. ಆದರೆ ಪಾಂಟಿಂಗ್ ಧೋನಿಗೆ ಮಣೆ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ