ಕೋಲ್ಕೊತ್ತಾ ಆಟಗಾರರಿಗೆ ಧಮ್ಕಿ ಹಾಕಿದ ನಾಯಕ ಗಂಭೀರ್! ಪರಿಣಾಮ ಏನಾಯ್ತು ಗೊತ್ತಾ?!

ಗುರುವಾರ, 27 ಏಪ್ರಿಲ್ 2017 (07:00 IST)
ಕೋಲ್ಕೊತ್ತಾ: ಮೊನ್ನೆಯಷ್ಟೇ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ ಪಂದ್ಯವೊಂದು ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಒಂದು ಘಟನೆಯೂ ನಡೆಯಿತು.

 
ಆ ಪಂದ್ಯದಲ್ಲಿ ಆರ್ ಸಿಬಿ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ 82 ರನ್ ಗಳ ಸೋಲನುಭವಿಸಿತ್ತು. ಆರ್ ಸಿಬಿ ಕೇವಲ 9.4 ಓವರ್ ಗಳಲ್ಲಿ 49 ರನ್ ಗಳಿಗೆ ಆಲೌಟ್ ಆಗಿದ್ದು ಮುಖಭಂಗ ಅನುಭವಿಸಿತು.

ಈ ಪಂದ್ಯದಲ್ಲಿ ಮೊದಲು ಕೋಲ್ಕೊತ್ತಾ ಬ್ಯಾಟಿಂಗ್ ನಡೆಸಿ ಕೇವಲ 132 ರನ್ ಗಳಿಸಿತ್ತಷ್ಟೇ. ಆಗ ಗಂಭೀರ್ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದ್ದವು. ಚೇಸಿಂಗ್ ವೀರ ಕೊಹ್ಲಿ, ಎಬಿಡಿ ವಿಲಿಯರ್ಸ್ ಇರುವ ತಂಡದೆದುರು ಈ ಜುಜುಬಿ ಮೊತ್ತ ಸಾಕಾಗದು ಎಂಬುದು ಗಂಭೀರ್ ಗೆ ಸ್ಪಷ್ಟವಾಗಿತ್ತು.

ಆದರೆ ತಮ್ಮ ತಂಡವನ್ನು ಇದಕ್ಕೆ ಸಿದ್ಧಗೊಳಿಸಬೇಕಲ್ಲಾ? ಅದಕ್ಕೆ ಗಂಭೀರ್ ಇನಿಂಗ್ಸ್ ಬ್ರೇಕ್ ಸಂದರ್ಭದಲ್ಲಿ ಎಲ್ಲರನ್ನೂ ಕರೆದು ಪುಟ್ಟ ಭಾಷಣವನ್ನೇ ಮಾಡಿದರು. ಅಲ್ಲದೆ ಆಟಗಾರರಿಗೆ ಒಂದು ಬೆದರಿಕೆಯನ್ನೂ ಹಾಕಿದರು. ಅದೇನೆಂದರೆ ‘ಯಾರು ಈ ಪಂದ್ಯದಲ್ಲಿ ತಮ್ಮ ಶತಪ್ರಯತ್ನ ನಡೆಸುವುದಿಲ್ಲವೋ ಅವರು ಮುಂದೆ ಕೆಕೆಆರ್ ತಂಡಕ್ಕೆ ಆಡುವುದಿಲ್ಲ. ಆಡಲು ನನ್ನ ನಾಯಕತ್ವದಲ್ಲಂತೂ ಅವಕಾಶ ಕೊಡುವುದಿಲ್ಲ ಎಂದು ಬಿಟ್ಟರಂತೆ.

ಅಷ್ಟೇ ಸಾಕಾಯಿತು ನೋಡಿ. ತಂಡದಲ್ಲಿ ಮಂಕು ಬಡಿದಂತಿದ್ದವರೆಲ್ಲಾ ಎದ್ದೆನೋ ಬಿದ್ದೆನೋ ಎಂದು ಬೆವರು ಸುರಿಸಿದರು. ಪರಿಣಾಮ ನಿಮಗೆ ಗೊತ್ತೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ