ಗೌತಮ್ ಗಂಭೀರ್-ಕ್ರಿಸ್ ಲಿನ್ ಘರ್ಜನೆಗೆ ನಡುಗಿದ ಗುಜರಾತ್ ಲಯನ್ಸ್

ಶನಿವಾರ, 8 ಏಪ್ರಿಲ್ 2017 (06:15 IST)
ನವದೆಹಲಿ: 183 ರನ್ ಗಳ ಮೊತ್ತ ಬೆನ್ನತ್ತುವುದು ಸುಲಭವಲ್ಲ. ಆದರೆ ಗೌತಮ್ ಗಂಭೀರ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಅದು ಸುಲಭ ತುತ್ತಾಯಿತು. ಅದಕ್ಕೆ ಕಾರಣ ಸಿಡಿದೆದ್ದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್.

 

ಕೇವಲ 48 ಬಾಲ್ ಗಳ ನೆರವಿನಿಂದ 76 ರನ್ ಗಂಭೀರ್ ಬ್ಯಾಟಿನಿಂದ ಸಿಡಿಯಿತು. ಅವರ ಸಾಥಿ ಕ್ರಿಸ್ ಲಿನ್ ಕೇವಲ41 ಬಾಲ್ ಗಳಲ್ಲಿ 91 ರನ್ ಬಾರಿಸಿದರು. ಇಷ್ಟಾಗಿಯೂ ನಾಟೌಟ್ ಆಗಿ ಉಳಿದ ಈ ಜೋಡಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ 10 ವಿಕೆಟ್ ಗಳ ಭರ್ಜರಿ ಜಯ ಕೊಡಿಸಿತು. ಈ ಪಂದ್ಯದಲ್ಲಿ ಫಾರ್ಮ್ ನಲ್ಲಿಲ್ಲದ ಕನ್ನಡಿಗ ರಾಬಿನ್ ಉತ್ತಪ್ಪ ಬದಲಿಗೆ ಲಿನ್ ಆರಂಭಿಕರಾಗಿ ಲಿನ್ ಬಡ್ತಿ ಪಡೆದಿದ್ದರು.

 
ಇದರೊಂದಿಗೆ ಟೂರ್ನಮೆಂಟ್ ನಲ್ಲಿ ಕೋಲ್ಕೊತ್ತಾ ಭರ್ಜರಿ ಆರಂಭ ಪಡೆಯಿತು. ಅತ್ತ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ಗೆ ಮುಖಭಂಗವಾಯಿತು. ರೈನಾ ಔಟಾಗದೇ 68 ರನ್ ಮಾಡಿದ್ದರು. ಗುಜರಾತ್ ತನ್ನ ಶ್ರೇಷ್ಠ ಆಟಗಾರ ರವೀಂದ್ರ ಜಡೇಜಾರನ್ನು ಬಹುವಾಗಿ ಮಿಸ್ ಮಾಡಿಕೊಂಡಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ