ಸುಕ್ಮಾ ದಾಳಿಗೆ ತುತ್ತಾದ ಹುತಾತ್ಮರ ಮಕ್ಕಳಿಗೆ ಪಂದ್ಯ ಪುರುಷ ಪ್ರಶಸ್ತಿ ಹಣ ನೀಡಿದ ಗಂಭೀರ್
ಶನಿವಾರ, 29 ಏಪ್ರಿಲ್ 2017 (08:59 IST)
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ನುಡಿದಂತೆ ನಡೆದುಕೊಂಡಿದ್ದಾರೆ. ಸುಕ್ಮಾ ದಾಳಿಗೆ ತುತ್ತಾದ ಹುತಾತ್ಮ ಯೋಧರ ಮಕ್ಕಳಿಗೆ ಐಪಿಎಲ್ ಪಂದ್ಯದಲ್ಲಿ ತಮಗೆ ಸಿಕ್ಕಿದ ಪಂದ್ಯ ಪುರುಷ ಪ್ರಶಸ್ತಿ ಹಣವನ್ನು ದಾನ ಮಾಡಿದ್ದಾರೆ.
ಸುಕ್ಮಾ ಹುತಾತ್ಮ ಯೋಧರ ಮಕ್ಕಳ ಸ್ಥಿತಿಗತಿ ನೋಡಿ ಬೇಸರವೆನಿಸಿತು. ನನ್ನ ಪ್ರತಿಷ್ಠಾನದ ವತಿಯಿಂದ ಅವರ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ನಿಭಾಯಿಸುವೆ ಎಂದು ಗಂಭೀರ್ ಹೇಳಿದ್ದರು.
ಅದರಂತೆ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ಗಂಭೀರ್ ಅರ್ಧಶತಕ ಗಳಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದಿದ್ದರು. ನಂತರ ಪಂದ್ಯ ಪುರುಷ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡುವಾಗ ‘ನಾನು ಯಾವುದೇ ಪ್ರಶಸ್ತಿ ಹಣ ಗೆದ್ದರೂ, ಅದು ಯೋಧರ ಕುಟುಂಬಕ್ಕೆ ಸೇರುತ್ತದೆ’ ಎಂದಿದ್ದರು.
ಗಂಭೀರ್ ಆಗಾಗ ಯೋಧರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ ಸುದ್ದಿಯಾಗುತ್ತಾರೆ. ಇದೀಗ ಧನ ಸಹಾಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಗಂಭೀರ್ ನಡೆಯನ್ನು ಟ್ವಿಟರ್ ನಲ್ಲಿ ಮೆಚ್ಚಿಕೊಂಡಿದ್ದು, ಅವರು ಯುವಕರಿಗೆ ಆದರ್ಶ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ