ಹೋಟೆಲ್ ನ ಬೇರರ್ ಇದೀಗ ಐಪಿಎಲ್ ಆಟಗಾರ!

ಶನಿವಾರ, 20 ಮೇ 2017 (07:27 IST)
ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅದರದ್ದೇ ಆದ ಖದರ್ ಇದೆ. ಅಲ್ಲಿ ಪ್ರತಿಭಾವಂತ ಆಟಗಾರರು ಮಾತ್ರವಲ್ಲ, ಸಹಾಯಕ ಸಿಬ್ಬಂದಿ ಕೂಡಾ ಘಟಾನುಘಟಿಗಳೇ.

 
ಇಂತಹ ಮುಂಬೈ ತಂಡದಲ್ಲಿ ಒಬ್ಬ ಸ್ಪೆಷಲ್ ಆಟಗಾರನಿದ್ದಾನೆ. ಅವರೇ ಖುಲ್ವಂತ್ ಕೆಜ್ರೋಲಿಯೋ. 25 ವರ್ಷದ ಈ ವೇಗಿಯ ಇತಿಹಾಸವೇ ವಿಶೇಷವಾಗಿದೆ. ಇವರು ಮೂಲತಃ ರೆಸ್ಟೋರೆಂಟ್ ಒಂದರಲ್ಲಿ ಬೇರರ್ ಆಗಿದ್ದರಂತೆ!

ಗೋವಾದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಖುಲ್ವಂತ್ ರಲ್ಲಿದ್ದ ಪ್ರತಿಭೆ ಗುರುತಿಸಿ ಅವರ ಸ್ನೇಹಿತರೊಬ್ಬರು ದೆಹಲಿಗೆ ಕ್ರಿಕೆಟ್ ತರಬೇತಿಗೆ ಕಳುಹಿಸಿಕೊಟ್ಟರಂತೆ. ಆದರೆ ಮನೆಯಲ್ಲಿ ಸುಳ್ಳು ಹೇಳಿ ಖುಲ್ವಂತ್ ದೆಹಲಿಯ ಎಲ್ ಬಿ ಶಾಸ್ತ್ರಿ ಕ್ರಿಕೆಟ್ ಕ್ಲಬ್ ಗೆ ಸೇರಿಕೊಂಡರು.

ಇದೇ ಕ್ರಿಕೆಟ್ ಕ್ಲಬ್ ನಲ್ಲಿ ಗೌತಮ್ ಗಂಭೀರ್ ಸೇರಿದಂತೆ ದೆಹಲಿಯ ಘಟಾನುಘಟಿ ಆಟಗಾರರು ತರಬೇತುಗೊಂಡಿದ್ದರು. ಇಲ್ಲಿ ಕೋಚ್ ಸಂಜಯ್ ಭಾರಧ್ವಾಜ್ ಸಹಾಯದಿಂದ ಉಳಕೊಳ್ಳಲು ವಸತಿ ಪಡೆದು ಚೆನ್ನಾಗಿ ಅಭ್ಯಾಸ ನಡೆಸಿದ ಖುಲ್ವಂತ್ ಇಂದು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ