ನವದೆಹಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಮತ್ತೊಬ್ಬ ಕ್ರಿಕೆಟಿಗನಿಗೆ ಪಿತೃ ವಿಯೋಗವಾಗಿದೆ. ಪುಣೆ ತಂಡದ ಮನೋಜ್ ತಿವಾರಿ ತಂದೆ ಶ್ಯಾಮ್ ಶಂಕರ್ ತಿವಾರಿ ಇಹಲೋಕ ತ್ಯಜಿಸಿದ್ದು, ಕ್ರಿಕೆಟಿಗ ಐಪಿಎಲ್ ಬಿಟ್ಟು ಮನೆಗೆ ತೆರಳಿದ್ದಾರೆ.
ನಿನ್ನೆ ನಡೆದ ಐಪಿಎಲ್ ಪಂದ್ಯದ ಟಾಸ್ ಸಂದರ್ಭದಲ್ಲಿ ಪುಣೆ ನಾಯಕ ಅಜಿಂಕ್ಯ ರೆಹಾನೆ ಹೇಳಿದ್ದಾರೆ. ಹೀಗಾಗಿ ತಿವಾರಿ ನಿನ್ನೆಯ ಪಂದ್ಯದಲ್ಲಿ ಆಡಿರಲಿಲ್ಲ. ತಿವಾರಿ ಬದಲು ರಾಹುಲ್ ತ್ರಿಪಾಟಿ ಕಣಕ್ಕಿಳಿದಿದ್ದರು.
ಮೊನ್ನೆಯಷ್ಟೇ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ ರಿಷಬ್ ಪಂತ್ ತಂದೆಯನ್ನು ಕಳೆದುಕೊಂಡಿದ್ದರು. ನಂತರ ತಂಡಕ್ಕೆ ಮರಳಿದ ಅವರು, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ