ಐಪಿಎಲ್: ಚೆನ್ನೈ, ರಾಜಸ್ಥಾನ್ ತಂಡದ ಮರಳಿ ಕಣಕ್ಕೆ?!

ಶನಿವಾರ, 15 ಏಪ್ರಿಲ್ 2017 (13:17 IST)

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳೇ? ಹಾಗಿದ್ದರೆ ಈ ಸುದ್ದಿ ನಿಮಗೆ ಖುಷಿ ತರಲೇಬೇಕು. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ತಂಡಗಳು ಐಪಿಎಲ್ ನಿಂದ ನಿಷೇಧಕ್ಕೊಳಗಾಗಿತ್ತು.

 

ಆದರೆ ಮುಂದಿ ಐಪಿಎಲ್ ವೇಳೆಗೆ ಎರಡೂ ತಂಡಗಳನ್ನು ಸೇರಿಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ. ಎರಡು ವರ್ಷದ ನಿಷೇಧ ಶಿಕ್ಷೆ ಮುಗಿಸಿರುವ ಎರಡೂ ತಂಡಗಳು ಮತ್ತೆ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿವೆ ಎಂಬ ಸುದ್ದಿ ಬಂದಿದೆ.

 

ಕೆಲವು ದಿನಗಳ ಹಿಂದೆ ಚೆನ್ನೈ ತಂಡದ ಮಾಲಿಕರು ಈ ಬಗ್ಗೆ ಸುಳಿವು ನೀಡಿದ್ದರಲ್ಲದೆ, ಧೋನಿ ಮತ್ತೆ ನಾಯಕರಾಗುತ್ತಾರೆ ಎಂದಿತ್ತು. ಅದಕ್ಕೀಗ ಪುಷ್ಠಿ ಬಂದಿದೆ. ಈಗಾಗಲೇ ಪುಣೆ ತಂಡದಲ್ಲಿ ಸಂಬಂಧ ಹಳಸಿಕೊಂಡಿರುವ ಧೋನಿ ಚೆನ್ನೈ ತಂಡಕ್ಕೆ ಮರಳುವ ಎಲ್ಲಾ ಸಾಧ್ಯತೆಯೂ ಇದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ