ಐಪಿಎಲ್: ಕೊನೆಗೂ ನಿಟ್ಟುಸಿರು ಬಿಟ್ಟ ವಿರಾಟ್ ಕೊಹ್ಲಿ

ಸೋಮವಾರ, 15 ಮೇ 2017 (07:51 IST)
ನವದೆಹಲಿ: ಅದೆಷ್ಟೋ ದಿನಗಳಾಯ್ತು ವಿರಾಟ್ ಕೊಹ್ಲಿ ಮತ್ತು ಬಳಗದ ಮುಖದಲ್ಲಿ ಗೆಲುವಿನ ಕಳೆ ನೋಡಿ. ನಿನ್ನೆ ನಡೆದ ಪಂದ್ಯದಲ್ಲಿ ಕೊನೆಗೂ ಅದು ಸಾಧ್ಯವಾಯ್ತು. ಅಭಿಮಾನಿಗಳೂ ಖುಷಿಯಾದರು.

 
ಕೊನೆಯ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 10 ರನ್ ಗಳ ಗೆಲುವು ಕಂಡ ಆರ್ ಸಿಬಿ ಈ ಐಪಿಎಲ್ ಆವೃತ್ತಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸಮಾಧಾನದೊಂದಿಗೆ ಮನೆಗೆ ಮರಳಿತು.

ಡೆಲ್ಲಿಗೆ ಕೊನೆಯ ಓವರ್ ನಲ್ಲಿ 13 ರನ್ ಗಳಿಸಿದ್ದರೆ ಸಾಕಿತ್ತು. ಆದರೆ ಅದು ಕೇವಲ ಮೂರು ರನ್ ಗಳಸಿ ಆಲೌಟ್ ಆಯಿತು. ಬೆಂಗಳೂರು ಪರ ಪವನ್ ನೇಗಿ ಎಸೆದಿದ್ದು ಎರಡು ಓವರ್ ಆದರೂ ಮೂರು ವಿಕೆಟ್ ಕಿತ್ತು ಘಾತಕರಾದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ನಾಯಕ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅದ್ಭುತ ಬ್ಯಾಟಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಗೇಲ್ 48 ಮತ್ತು ಕೊಹ್ಲಿ 58 ರನ್ ಗಳಿಸಿದರು. ಬಹುಶಃ ಇವರಿಬ್ಬರ ಬ್ಯಾಟಿಂಗ್ ನೋಡಿ ತಂಡಕ್ಕೆ ಬೂಸ್ಟ್ ಸಿಕ್ಕಂತಾಯಿತೇನೋ.

ಆದರೂ ಕೊಹ್ಲಿಗಿದು ಚಾಂಪಿಯನ್ಸ್ ಟ್ರೋಫಿಗೆ ಮೊದಲು ಕಾನ್ಫಿಡೆಂಟ್ ಬೂಸ್ಟರ್ ಪಂದ್ಯವಾಗಿತ್ತು. ಗೇಲ್ ಶೈಲಿಯಲ್ಲಿ ಬ್ಯಾಟ್ ಬೀಸಿದ ಅವರು ತಮ್ಮ ಇನಿಂಗ್ಸ್ ನಲ್ಲಿ ಮೂರು ಭರ್ಜರಿ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಆರ್ ಸಿಬಿ 13 ಪಂದ್ಯಗಳಿಂದ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ