ಐಪಿಎಲ್: ಅಪ್ಪನ ಅಂತ್ಯಕ್ರಿಯೆ ಮುಗಿಸಿ ದೆಹಲಿ ತಂಡಕ್ಕೆ ಮರಳಿದ ಕ್ರಿಕೆಟಿಗ

ಶನಿವಾರ, 8 ಏಪ್ರಿಲ್ 2017 (06:55 IST)
ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸೆನ್ಸೇಷನಲ್ ಕ್ರಿಕೆಟಿಗ ರಿಷಬ್ ಪಂತ್ ಗೆ ಇದೀಗ ಒಂದೊಡೆ ತಂಡಕ್ಕಾಗಿ ಆಡುವ ತವಕ ಇನ್ನೊಂದೆಡೆ ಅಪ್ಪನ ಸಾವಿನ ದುಃಖ. ತಂದೆಯ ಅಂತ್ಯಕ್ರಿಯೆ ಮುಗಿಸಿ ಇದೀಗ ರಿಷಬ್ ತಂಡಕ್ಕೆ ಮರಳಿದ್ದಾರೆ.

 

ಬುಧವಾರ ರಾತ್ರಿ ರಿಷಬ್ ತಂದೆ ರಾಜೇಂದ್ರ ಪಂತ್ ಮತಪಟ್ಟಿದ್ದರು. ಹರಿದ್ವಾರದಲ್ಲಿ ಅವರ ಅಂತ್ಯಕ್ರಿಯೆ ಮುಗಿಸಿ ಇದೀಗ ರಿಷಬ್ ತಂಡವನ್ನು ಕೂಡಿಕೊಂಡಿದ್ದಾರೆ. ಆದರೂ ಅವರೀಗ ಪಂದ್ಯವಾಡುವ ಸ್ಥಿತಿಯಲ್ಲಿಲ್ಲ.

 
ಅದಕ್ಕೆ ಕಾರಣ, ತಂದೆಯ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾಲಿಗೆ ಸುಟ್ಟ ಗಾಯಗಳಾಗಿದ್ದು, ಇಂದು ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಗಾಯ ಗಂಭೀರವಲ್ಲದಿದ್ದರೂ, ಸದ್ಯ ದುಃಖದಲ್ಲಿರುವ ರಿಷಬ್ ಸೇವೆಯನ್ನು ಡೆಲ್ಲಿ ತಂಡ ಈ ಪಂದ್ಯಕ್ಕೆ ಪಡೆದುಕೊಳ್ಳುವುದು ಅನುಮಾನ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ