ಪುಣೆ: ಒಂದೆಡೆ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್! ಇನ್ನೊಂದು ತುದಿಯಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಪ್ರಬಲ ಪುಣೆ ಸೂಪರ್ ಜೈಂಟ್ ಗಳು! ಇವರಲ್ಲಿ ನಿಮ್ಮ ಫೇವರಿಟ್ ಯಾರು?
ಪುಣೆ ತಂಡಕ್ಕೆ ಇದೊಂಥರಾ ಅಗ್ನಿ ಪರೀಕ್ಷೆ. ಇದುವರೆಗೆ ನಾಯಕರಾಗಿದ್ದ ಧೋನಿ ಸ್ಥಾನಕ್ಕೆ ಈ ಬಾರಿ ಸ್ಟೀವ್ ಸ್ಮಿತ್ ಬಂದಿದ್ದಾರೆ. ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿರುವ ಪುಣೆಗೆ ಅಜಿಂಕ್ಯಾ ರೆಹಾನೆ, ಬೆನ್ ಸ್ಟೋಕ್ಸ್, ಫಾ ಡು ಪ್ಲೆಸಿಸ್ ರಂತಹ ಘಟಾನುಘಟಿ ನಾಯಕರ ಬಲವಿದೆ. ವಿಕೆಟ್ ಹಿಂದುಗಡೆ ಸಾರಥಿಯಾಗಿ ಧೋನಿಯಿರುವಾಗ ಪುಣೆ ತಂಡಕ್ಕೆ ಗೆಲ್ಲಲು ಇನ್ನೇನು ಬೇಕು?
ಅತ್ತ ಮುಂಬೈ ಕೂಡಾ ಕಮ್ಮಿಯೇನಲ್ಲ. ಗಾಯದಿಂದ ಚೇತರಿಸಿಕೊಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಕನ್ನಡಿಗರಾದ ಕೆ.ಗೌತಮ್ ಮತ್ತು ಶ್ರೇಯಾಸ್ ಗೋಪಾಲ್ ಹಾಗೂ ವಿನಯ್ ಕುಮಾರ್ ತಂಡದಲ್ಲಿದ್ದಾರೆ. ಹೀಗಾಗಿ ಕನ್ನಡಿಗರ ಒಲವು ಮುಂಬೈ ಪರ ವಾಲಬಹುದು. ಇವರ ಹೊರತಾಗಿ ಹರ್ಭಜನ್ ಸಿಂಗ್, ಲಸಿತ್ ಮಾಲಿಂಗ ತಂಡದ ಪ್ರಮುಖ ಆಟಗಾರರು. ಜತೆಗೆ ಮುಂಬೈಗೆ ಮಹೇಲಾ ಜಯವರ್ಧನೆ ರೂಪದಲ್ಲಿ ಹೊಸ ಗುರುವಿನ ಮಾರ್ಗದರ್ಶನವಿದೆ.
ಪುಣೆ ಬೌಲಿಂಗ್ ನಲ್ಲಿ ಕೊಂಚ ದುರ್ಬಲ. ಹೀಗಾಗಿ ಎಲ್ಲಾ ಫಿಟ್ ಆಟಗಾರರನ್ನು ಹೊಂದಿದ ಮುಂಬೈ ಬಲಾಢ್ಯ ಬ್ಯಾಟಿಂಗ್ ಕಟ್ಟಿಹಾಕಲು ಕೊಂಚ ಪರಿಶ್ರಮ ಪಡಬೇಕಾದೀತು. ಈ ತಂಡದಲ್ಲಿ ಎಲ್ಲರ ಕಣ್ಣು ದುಬಾರಿ ಬೆಲೆಗೆ ಮಾರಾಟವಾದ ಆಲ್ ರೌಂಡರ್ ಬೆನ್ ಸ್ಟೋಕ್. ಹಾಗಿದ್ದರೂ, ಯಾರು ಸಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ