ಕೇರಳ ಕ್ರಿಕೆಟಿಗನ ಸಾಹಸಕ್ಕೆ ಬೆಚ್ಚಿದ ಪುಣೆ ಸೂಪರ್ ಜೈಂಟ್!
ಬುಧವಾರ, 12 ಏಪ್ರಿಲ್ 2017 (08:56 IST)
ಪುಣೆ: ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಗೆ ಪುಣೆ ದೈತ್ಯರ ಬಳಿ ಉತ್ತರವೇ ಇರಲಿಲ್ಲ. ಸ್ಯಾಮ್ಸನ್ ರ ಭರ್ಜರಿ ಶತಕದ ಫಲವಾಗಿ ಡೆಲ್ಲಿ ಡೇರ್ ಡೆವಿಲ್ಸ್ 97 ರನ್ ಗಳಿಂದ ಪಂದ್ಯ ಗೆದ್ದುಕೊಂಡು ಬೀಗಿತು.
ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ವೀರರು,ನಾಲ್ಕು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸ್ಯಾಮ್ಸನ್ 63 ಎಸೆತಗಳಿಂದ, 5 ಸಿಕ್ಸರ್, 8 ಬೌಂಡರಿ ಸಮೇತ 102 ರನ್ ಚಚ್ಚಿದರು. ಮತ್ತೆ ಬ್ಯಾಟಿಂಗ್ ಗೆ ಇಳಿದ ಪುಣೆ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ 20 ರನ್ ಗಳಿಸಿದ್ದು ಬಿಟ್ಟರೆ, ಉಳಿದವರೆಲ್ಲರದ್ದು ಪೆವಿಲಿಯನ್ ಪೆರೇಡ್.
ಧೋನಿ (11), ಬೆನ್ ಸ್ಟೋಕ್ಸ್ (2), ರೆಹಾನೆ ಕೇವಲ 10 ರನ್ ಗಳಿಸಿ ಔಟಾಗಿದ್ದು, ತಂಡಕ್ಕೆ ಭಾರೀ ಹೊಡೆತ ನೀಡಿತು. ಹೀಗಾಗಿ ಯಾವುದೇ ಹಂತದಲ್ಲೂ ಪುಣೆ ಪ್ರತಿರೋಧದ ಲಕ್ಷಣವನ್ನೂ ತೋರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ