ಧೋನಿ, ಕೊಹ್ಲಿ ಓಡಿದ ಪ್ರತೀ ರನ್ ನ ಬೆಲೆ ಕೇಳಿದರೆ ದಂಗಾಗುತ್ತೀರಿ!

ಗುರುವಾರ, 25 ಮೇ 2017 (10:11 IST)
ಮುಂಬೈ: ಮೊನ್ನೆಯಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ, ಧೋನಿ, ಗೌತಮ್ ಗಂಭೀರ್,  ರೋಹಿತ್ ಶರ್ಮಾ ಮುಂತಾದ ಆಟಗಾರರನ್ನು ಆಯಾ ಫ್ರಾಂಚೈಸಿಗಳು ದುಬಾರಿ ಬೆಲೆಗೆ ಖರೀದಿಸಿದ್ದವು.

 
ಆದರೆ ಇವರಲ್ಲಿ ಗಂಭೀರ್, ರೋಹಿತ್ ಬಿಟ್ಟರೆ, ಉಳಿದ ದುಬಾರಿ ಆಟಗಾರರು ತಮಗೆ ಸಿಕ್ಕಿದ ಮೊತ್ತಕ್ಕೆ ತಕ್ಕ ರನ್ ಗಳಿಸಿರಲಿಲ್ಲ. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ. ಧೋನಿಯಾದರೂ, ಕೆಲವು ಇನಿಂಗ್ಸ್ ಗಳಲ್ಲಿ ನಿರ್ಣಾಯಕ ಇನಿಂಗ್ಸ್ ಆಡಿದರಾದರೂ, ದೊಡ್ಡ ಮೊತ್ತ ಗಳಿಸಿರಲಿಲ್ಲ.

ಹೀಗಾಗಿ ವಾಣಿಜ್ಯ ಪತ್ರಿಕೆಯೊಂದು ಅವರ ರನ್ ಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಲೆಕ್ಕ ಹಾಕಿದೆ. ಧೋನಿ ಮತ್ತು ಕೊಹ್ಲಿ ತಾವು ಗಳಿಸಿದ ಪ್ರತೀ ರನ್ ಗೆ 4 ಲಕ್ಷ ರೂ.ಗಳಷ್ಟು ಜೇಬಿಗಿಳಿಸಿಕೊಂಡಂತಾಗಿದೆ. ಕೊಹ್ಲಿ 4.8 ಲಕ್ಷ ರೂ ಗಳಿಸಿದರೆ ಧೋನಿ 4.3 ಲಕ್ಷ ಗಳಿಸಿದ್ದಾರೆ. ಇನ್ನು ಐಪಿಎಲ್ ನ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ ಕೂಡಾ ಸಾಧಾರಣ ಇವರಷ್ಟೇ ದುಬಾರಿಯಾಗಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ