ಧೋನಿ ಕಾಲೆಳೆಯಲು ಹೋಗಿ ಇಂಗು ತಿಂದ ಮಂಗನಾದ ಕೆವಿನ್ ಪೀಟರ್ಸನ್!
ಶುಕ್ರವಾರ, 7 ಏಪ್ರಿಲ್ 2017 (09:25 IST)
ಪುಣೆ: ಮಹೇಂದ್ರ ಸಿಂಗ್ ಧೋನಿ ಹೆಚ್ಚು ಮಾತನಾಡುವವರಲ್ಲ. ಆದರೆ ಕೆಣಕಲು ಬಂದವರನ್ನು ಸುಮ್ಮನೆ ಬಿಡುವವರಲ್ಲ ಎಂದು ಸಾಬೀತುಪಡಿಸಿದ್ದಾರೆ. ಅವರಿಂದ ಮಾತಿನ ಪೆಟ್ಟು ತಿಂದವರು ಕೆವಿನ್ ಪೀಟರ್ಸನ್.
ಮುಂಬೈ ವಿರುದ್ಧ ಪುಣೆ ಪಂದ್ಯವಾಡುತ್ತಿದ್ದಾಗ ಮೈಕ್ ಹಿಡಿದ ಕೆವಿನ್ ಪೀಟರ್ಸನ್, ಮನೋಜ್ ತಿವಾರಿ ಬಳಿ ಎಂಎಸ್ ಧೋನಿ ಬಳಿ ಹೋಗಿ ಹೇಳು, ನಾನು ಅವನಿಗಿಂತ ಉತ್ತಮ ಗಾಲ್ಫರ್ ಅಂತ ಎಂದು ಕಾಲೆಳೆದರು. ಇದನ್ನು ನಗು ನಗುತ್ತಲೇ ತಿವಾರಿ ಧೋನಿ ಬಳಿ ಹೇಳಿಕೊಂಡರು.
ತಕ್ಷಣ ಮೈಕ್ ಪಡೆದ ಧೋನಿ, ಮರೀಬೇಡ, ಆತ ನನ್ನ ಮೊದಲ ಟೆಸ್ಟ್ ವಿಕೆಟ್ ಬಲಿ ಎಂದು ನಗು ನಗುತ್ತಲೇ ಚುಚ್ಚಿದರು. ಇದಪ್ಪಾ ಒಬ್ಬ ಮಹಾನ್ ಆಟಗಾರರ ಬಳಿ ಹೋಗಿ ಇಂತಹ ಪ್ರಶ್ನೆ ಕೇಳಿದರೆ, ಗ್ರೇಟ್ ಉತ್ತರವೇ ಬರುತ್ತದೆ ಎಂದು ಕೆವಿನ್ ನಗುತ್ತಲೇ ಸುಮ್ಮನಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ