ಕೋಲ್ಕೊತ್ತಾ ಕೈಯಿಂದ ಪಂದ್ಯ ಕಿತ್ತುಕೊಂಡ ಮುಂಬೈ

ಸೋಮವಾರ, 10 ಏಪ್ರಿಲ್ 2017 (09:05 IST)
ಮುಂಬೈ: ಕೊನೆಯವರೆಗೂ ಈ ಪಂದ್ಯ ಕೋಲ್ಕೊತ್ತಾ ಪಾಲಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದೇ ಎಸೆತ ಬಾಕಿಯಿರುವಾಗ ಮುಂಬೈ ಪಂದ್ಯವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು.

 

ಗೆಲ್ಲಲು 17 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ಹುಡುಗರಿಗೆ ಕೊನೆಯ ಓವರ್ ನಲ್ಲಿ 19 ರನ್ ಬೇಕಿತ್ತು. ಹಾರ್ದಿಕ್ ಪಾಂಡ್ಯ ಕ್ರೀಸ್ ನಲ್ಲಿದ್ದರು. ಆದರೆ ಕೊಂಚ ಮೈ ಮರೆತ ಕೋಲ್ಕೊತ್ತಾ ಒಂದು ಬೌಂಡರಿ ತಾನಾಗೇ ಬಿಟ್ಟುಕೊಟ್ಟಿತಲ್ಲದೆ, ಪಾಂಡ್ಯ ಕ್ಯಾಚ್ ಕೈ ಬಿಟ್ಟಿತು.

 
ಪರಿಸ್ಥಿತಿಯ ಲಾಭವೆತ್ತಿದ ಪಾಂಡ್ಯ ಗೆಲುವು ಕೊಡಿಸಿಯೇಬಿಟ್ಟರು. ಕೋಲ್ಕೊತ್ತಾ ಪರ ಕನ್ನಡಿಗ ಮನೀಶ್ ಪಾಂಡೆ ಅಜೇಯ 81 ರನ್ ಸಿಡಿಸಿದರು. ಮುಂಬೈ ಪರ ರಾಣಾ ಅರ್ಧಶತಕ ದಾಖಲಿಸಿದರು.

 
ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಹೈದ್ರಾಬಾದ್ ಸತತ ಎರಡನೇ ಪಂದ್ಯ ಗೆದ್ದು ಬೀಗಿತು. ಗೆಲುವಿಗೆ 136 ರನ್ ಗಳ ಗುರಿ ಪಡೆದಿದ್ದ ಹೈದ್ರಾಬಾದ್ 15.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ ಕೊನೆಗೂ ಲಯ ಕಂಡುಕೊಂಡು ಅಜೇಯವಾಗಿ 76 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಮಿಂಚಿದ ಅಫ್ಘನ್ ಮೂಲದ ಬೌಲರ್ ರಶೀದ್ ಖಾನ್ ಗುಜರಾತ್ ನ ಪ್ರಮುಖ ಮೂರು ವಿಕೆಟ್ ಕಿತ್ತರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ