ತವರಿನಲ್ಲಿ ಎರಡನೇ ಗೆಲುವು ಕಂಡ ಮುಂಬೈ

ಗುರುವಾರ, 13 ಏಪ್ರಿಲ್ 2017 (07:48 IST)
ಮುಂಬೈ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಮುಂಬೈ ತವರಿನಲ್ಲಿ ಸತತ ಎರಡನೇ ಗೆಲುವು ಕಂಡಿದೆ.

 

ಇದರೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ ಮೂರನೇ ಸ್ಥಾನಕ್ಕೇರಿತು. ಮುಂಬೈ ಪರ ಯುವ ಆಟಗಾರರಾದ ಕೃನಾಲ್ ಪಾಂಡ್ಯ ಮತ್ತು ನಿತೀಶ್ ರಾಣಾ ಅದ್ಭುತ ಆಟವಾಡಿದರು. ಗೆಲುವಿಗೆ 158 ರನ್ ಗಳ ಗುರಿ ಪಡೆದಿದ್ದ ಮುಂಬೈ 6 ವಿಕೆಟ್ ಕಳೆದುಕೊಂಡು18.4 ಓವರ್ ಗಳಲ್ಲಿ ಗುರಿ ಮುಟ್ಟಿತು.

 
ನಿತೀಶ್ 45 ಮತ್ತು ಕೃನಾಲ್ 39 ರನ್ ಗಳಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಗೆ ಉತ್ತಮ ಆರಂಭ ದೊರಕಿತ್ತು. ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ಆದರೆ ನಂತರ ಬಂದ ಬ್ಯಾಟ್ಸ್ ಮನ್ ಗಳು ತಮಗೆ ಸಿಕ್ಕ ಆರಂಭದ ಲಾಭ ಬಳಸಿಕೊಳ್ಳದೆ ಹೈದರಾಬಾದ್ ದೊಡ್ಡ ಮೊತ್ತದ ಕನಸು ನನಸಾಗಲಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ