ರಾಯಲ್ಸ್ ಚಾಲೆಂರ್ಸ್ ಬೆಂಗಳೂರು ತಂಡಕ್ಕೆ ಹೊಸ ಆಟಗಾರರು

ಶನಿವಾರ, 8 ಏಪ್ರಿಲ್ 2017 (12:10 IST)
ಬೆಂಗಳೂರು: ಗಾಯಗೊಂಡ ಕೆಎಲ್ ರಾಹುಲ್ ಮತ್ತು ಡುಮಿನಿ ಬದಲಿಗೆ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ ಹೊಸ ಆಟಗಾರರನ್ನು  ತಂಡಕ್ಕೆ ಸೇರ್ಪಡೆಗೊಳಿಸಿದೆ.

 

ಆಸ್ಟ್ರೇಲಿಯಾದ ಬೌಲರ್ ಬೆನ್ ಹಿಲ್ಫೆನಾಸ್  ಮತ್ತು ವಿಷ್ಣು ವಿನೋದ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಭುಜದ ಗಾಯದಿಂದ ರಾಹುಲ್ ಐಪಿಎಲ್ ನಿಂದ ಹೊರಗುಳಿದಿದ್ದಾರೆ.

 
ಇಂದು ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸೆಣಸಲಿದೆ. ವಿಷ್ಣು ವಿನೋದ್ ವಿಕೆಟ್ ಕೀಪರ್ ಕೇರಳ ಮೂಲದವರು. ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿಲ್ಲ. ಆದರೂ ಇಲ್ಲಿ ರಾಹುಲ್ ಬದಲಿಗೆ ಕಣಕ್ಕಿಳಿಯಲಿದ್ದಾರೆ.

 
ಗಾಯಾಳುಗಳ ಪಟ್ಟಿ ಬೆಳೆಯುತ್ತಿರುವುದರಿಂದ ಚಿಂತೆಗೊಳಗಾಗಿರುವ ಬೆಂಗಳೂರು ತಂಡಕ್ಕೆ ಈ ಇಬ್ಬರು ಹೇಗೆ ಚೇತರಿಕೆ ನೀಡುತ್ತಾರೆ ಕಾದು ನೋಡಬೇಕು. ಹಿಲ್ಫೆನಾಸ್ ಗೆ ಅಂತಾರಾಷ್ಟ್ರೀಯ ಪಂದ್ಯವಾಡಿದ ಅನುಭವವಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ